ಬೀದಿ ಪಾಲಾದ ಬೆಂಗಳೂರು ಯುವತಿ

6

ಬೀದಿ ಪಾಲಾದ ಬೆಂಗಳೂರು ಯುವತಿ

Published:
Updated:

ಬಾಳೆಹೊನ್ನೂರು: ಯುವಕನನ್ನು ನಂಬಿ ಪಟ್ಟಣಕ್ಕೆ ಬಂದ ಬೆಂಗಳೂರಿನ ಯುವತಿ ಬೀದಿ ಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೂರು ದಿನಗಳ ಹಿಂದೆ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಸಂಜೆ ವೇಳೆ ಒಬ್ಬ ಯುವತಿ ಕುಳಿತಿದ್ದನ್ನು ಕಂಡ ಸ್ಥಳೀಯರು ಠಾಣೆಗೆ ಸುದ್ದಿ ಮುಟ್ಟಿಸಿ­ದ್ದರು. ಪೊಲೀಸರು ಸ್ಥಳಕ್ಕೆ ಬಂದು ಯುವತಿಯನ್ನು ವಿಚಾರಿಸಿದಾಗ ಆಕೆ ಮೋಸ ಹೋದ ಘಟನೆ ತಿಳಿದು ಬಂದಿದೆ.ಬಾಳೆಹೊನ್ನೂರು ಸಮೀಪದ ಯುವಕ­ನೊಬ್ಬ ಆಕೆಯನ್ನು ಕರೆತಂದು ಆಕೆಗೆ ಇಡೀ ದಿನ ಊಟ ತಿಂಡಿ ಕೊಡಿಸಿ, ಸಂಜೆ ವೇಳೆ ಮದ್ಯಪಾನ ಮಾಡಿಸಿದ್ದಾನೆ. ಯುವತಿಗೆ ಮತ್ತೇರಿದ ನಂತರ ಆಕೆಯನ್ನು ರಾತ್ರಿ 7 ಗಂಟೆ ಸುಮಾರಿಗೆ ಬಸ್‌ ನಿಲ್ದಾಣಕ್ಕೆ ಕರೆತಂದು ಆಕೆಯೊಂದಿಗೆ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದ್ದಾನೆ. ನಂತರ ಹಣ್ಣು, ನೀರು ತರುವುದಾಗಿ ತಿಳಿಸಿ ಹೊರಟುಹೋದ ಆತ ಮತ್ತೆ ನಿಲ್ದಾಣದ ಕಡೆ ಸುಳಿಯಲಿಲ್ಲ.ಆಧುನಿಕ ಧಿರಿಸು ತೊಟ್ಟು ಕುಡಿದ ಮತ್ತಿನಲ್ಲಿದ್ದ ಸುಮಾರು 21ರ ಪ್ರಾಯದ ಯುವತಿ ಬೆಂಗಳೂರಿಗೆ ತೆರ­ಳಲು ಅಣಿಯಾದರೂ ಕೈಯಲ್ಲಿ ಬಿಡಿ­ಕಾಸು ಇರಲಿಲ್ಲ. ಕರೆ ತಂದವರಾರು, ಆತನ ಹೆಸರು, ಮನೆಯ ವಿಳಾಸ­ವನ್ನೂ ಹೇಳುವ ಸ್ಥಿತಿಯಲ್ಲಿ ಆಕೆ ಇರದಿ­ದ್ದನ್ನು ಕಂಡ ಪೊಲೀಸರು  ಅರೆಕ್ಷಣ ದಂಗಾದರು.ಪಟ್ಟಣದಿಂದ ಸುಮಾರು 5ರಿಂದ 6 ಕೀಮಿ ದೂರದ ಮನೆಗೆ ಯುವಕ ತನ್ನನ್ನು ಕರೆದೊಯ್ದಿದ್ದ ಎನ್ನುವು­ದಷ್ಟೇ ಆಕೆಯ ಹೇಳಿಕೆ­ಯಾಗಿತ್ತು. ಆಕೆಯನ್ನು ಕರೆತಂದ ಯುವಕ ಯಾರು ಎನ್ನುವುದು ಕೊನೆಗೂ ಕಗ್ಗಂಟಾಗಿಯೇ ಉಳಿ­ಯಿತು. ಕೊನೆಗೆ ಸ್ಥಳೀಯ ವರ್ತಕರು, ಆಟೊ ಚಾಲಕರ ಮನವೊಲಿಸಿದ ಪೊಲೀಸರು ಆಕೆಯ ಬಸ್‌ಚಾರ್ಜ್‌ಗೆ ಹಣವನ್ನು ಒಟ್ಟುಗೂಡಿಸಿ ಕೊಟ್ಟು ಬೆಂಗಳೂರಿಗೆ ವಾಪಸ್‌ ಕಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry