ಗುರುವಾರ , ಮೇ 13, 2021
16 °C

ಬೀದಿ ಬದಿ ತಿಂಡಿ ಮಾರಾಟ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬೇಸಿಗೆ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿ ರುವ ಹಿನ್ನೆಲೆಯಲ್ಲಿ ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಶುಕ್ರವಾರ ನಗರದ ಪ್ರಮುಖ ರಸ್ತೆಗಳಲ್ಲಿ ದಾಳಿ ನಡೆಸಿ, ಬೀದಿ ಬದಿ ತಿಂಡಿ ಮಾರಾಟ ಮಾಡುವುದನ್ನು ಬಂದ್ ಮಾಡಿದರು. ಬೆಳಿಗ್ಗೆ 10.30 ಗಂಟೆಗೆ ನಗರದ ಪುರಭವನದ ಮುಂಭಾಗದ ರಸ್ತೆಯಲ್ಲಿ ತಿಂಡಿ ತಿನಿಸು ಮಾರುತ್ತಿದ್ದ ಅಂಗಡಿಗ ಳನ್ನು ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ ನೇತೃತ್ವದ ತಂಡ ತೆರವು ಗೊಳಿಸಿತು.ಕಾರ್ಯಾಚರಣೆಗೆ ಅಡ್ಡಿ ಪಡಿಸಿದ ಅಂಗಡಿ ಮಾಲೀಕರ ಟೇಬಲ್, ಖುರ್ಚಿ, ಗ್ಯಾಸ್ ಸಿಲಿಂಡರ್‌ಗಳನ್ನು ಪಾಲಿಕೆಯ ಧನುಷ್ ಸಿಬ್ಬಂದಿ ಲಾರಿಗ ಳಲ್ಲಿ ತುಂಬಿಕೊಂಡು ಪುರಭವನ ಆವರ ಣದಲ್ಲಿ ಇಳಿಸಿದರು. ಬಳಿಕ ಚಂದ್ರಗುಪ್ತ ರಸ್ತೆ, ಕೃಷ್ಣವಿಲಾಸ ರಸ್ತೆ, ದಿವಾನ್ಸ್ ರಸ್ತೆಯಲ್ಲಿ ಕತ್ತರಿಸಿದ ಹಣ್ಣುಗಳನ್ನು ಮಾರುವ ಅಂಗಡಿಗಳ ಮೇಲೂ ದಾಳಿ ನಡೆಸಿ ಬಂದ್ ಮಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ನಾಗರಾಜ, `ಪಾಲಿಕೆ ಆಯುಕ್ತ ಕೆ.ಎಸ್.ರಾಯ್ಕರ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬೀದಿ ಬದಿ ತಿಂಡಿ ಮಾರು ತ್ತಿರುವುದನ್ನು ಬಂದ್ ಮಾಡಿಸಲಾಗಿದೆ. ಮುಂದಿನ ಆದೇಶ ಬರುವವರೆಗೂ ಬಂದ್ ಮಾಡುವಂತೆ ಅಂಗಡಿ ಮಾಲೀ ಕರಿಗೆ ಸೂಚಿಸಲಾಗಿದೆ. ಬೇಸಿಗೆ ಮುಗಿ ಯುವವರೆಗೆ ನಿತ್ಯ ತೆರವು ಕಾರ್ಯಾ ಚರಣೆ ನಡೆಸಲಾಗುವುದು~ ಎಂದರು.ಕಾರ್ಯಾಚರಣೆ ವೇಳೆ 150ಕ್ಕೂ ಹೆಚ್ಚು ಬೀದಿ ಬದಿ ಅಂಗಡಿಗಳನ್ನು ತೆರವುಗೊ ಳಿಸಿ, ತಾತ್ಕಾಲಿಕವಾಗಿ ತಿಂಡಿ ಮಾರಾಟ ಮಾಡುವುದನ್ನು ನಿಲ್ಲಿಸಲಾಯಿತು. ಕೃಷ್ಣವಿಲಾಸ್ ರಸ್ತೆಯಲ್ಲಿ ್ಯ ವ್ಯಾಪಾರ ಮಾಡುವ ಮಹಿಳೆಯೊಬ್ಬರು ನೋಟಿಸ್ ನೀಡದೆ ತೆರವುಗೊಳಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯ ಪ್ರವೇಶಿಸಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜ್ ಈ ಕುರಿತು ಪತ್ರಿಕಾ ಹೇಳಿಕೆ ನೀಡಲಾಗಿದೆ. `ನೀವು ಓದಿ ್ಲಲವಾ?~ ಎಂದು ಕೇಳಿದರು. ಇದ ರಿಂದ ಸಿಟ್ಟಿಗೆದ್ದ ಮಹಿಳೆ, `ವ್ಯಾಪಾರ ಮಾಡಿ ಜೀವನ ಸಾಗಿಸೋದೆ ಕಷ್ಟ ಆಗಿದೆ. ಪತ್ರಿಕೆ ಓದೋಕೆ ಸಮಯ ಎಲ್ಲಿ ಇರುತ್ತದೆ~ ಎಂದು ತರಾಟೆಗೆ ತೆಗೆದುಕೊಂಡರು. ಪಾಲಿಕೆ ಎಸಿ ಇ.ತಿಮ್ಮಪ್ಪ, ಹೆಲ್ತ್ ಇನ್ಸ್ ಪೆಕ್ಟರ್‌ಗಳಾದ ಕೃಷ್ಣ, ಬಾಲಚಂದ್ರ, ಧನುಷ್ ಸಿಬ್ಬಂದಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.