ಶುಕ್ರವಾರ, ಜೂನ್ 18, 2021
22 °C

ಬೀರನ ಪ್ರಪಂಚ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರನ ಪ್ರಪಂಚ!

`ಜೀವನದಲ್ಲಿ ಆಸೆ ಹುಟ್ಟುವುದು ಸಹಜ. ಅದು ಹುಟ್ಟಿದ ತಕ್ಷಣ ಈಡೇರಲು ಸಾಧ್ಯವಿಲ್ಲವಾದರೂ ಮಾಡುವ ಪ್ರಯತ್ನದಲ್ಲಿ ಶ್ರದ್ಧೆ ಇದ್ದರೆ ನಿಧಾನವಾಗಿ ಅದು ನನಸಾಗುವ ಕಾಲ ಬಂದೇ ಬರುತ್ತದೆ~ ಎಂದು ತಮ್ಮ ಗುರುಗಳೊಬ್ಬರ ಮಾತನ್ನು ಸ್ಮರಿಸಿಕೊಂಡರು ನಟ `ಗುಂಡ್ರಗೋವಿ~ ಸತ್ಯ.ನಾನು ಹೀರೋ ಪಾತ್ರಕ್ಕೆ ಯೋಗ್ಯವಾದ ಮುಖಚರ್ಯೆ ಹೊಂದಿಲ್ಲ. ಆದರೂ ಅವಕಾಶಗಳು ನನ್ನ ಬಳಿ ಬರುತ್ತಿವೆ. ಉತ್ತಮ ನಟನಾಗುವ ಬಯಕೆ ಕೈಗೂಡುತ್ತಿವೆ ಎಂಬ ಸಂತಸವನ್ನು ಅವರು ವ್ಯಕ್ತಪಡಿಸಿದ್ದು ಅವರ ನಟನೆಯ `ಬೀರ~ ಚಿತ್ರದ ಸುದ್ದಿಗೋಷ್ಠಿಯಲ್ಲಿ.ತಮ್ಮ ನಟನೆಯನ್ನು ಸಾಣೆ ಒಡ್ಡುವ ಪಾತ್ರ ತಮ್ಮದು ಎಂದು ಸತ್ಯ ಹೇಳಿಕೊಂಡರು. ಚಿತ್ರದಲ್ಲಿ ಅವರು ಐದು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಯಾರೂ ಗುರುತು ಹಿಡಿಯಲು ಸಾಧ್ಯವಾಗದ `ಅವತಾರ್~ ಚಿತ್ರದ ಪಾತ್ರದ ವೇಷವನ್ನೂ ಅವರು ತೊಟ್ಟಿದ್ದಾರಂತೆ. ತಮ್ಮ ನಟನೆ ಹೇಗೆ ಮೂಡಿಬಂದಿದೆ ಎಂಬುದರ ಬಗ್ಗೆ ಅವರಲ್ಲಿ ಭಯವೂ ಇದೆಯಂತೆ. ಮುಂದೆ ದೊಡ್ಡ ಹೀರೋ ಆಗುತ್ತೇನೆ ಎಂಬ ಕನಸುಗಳು ತಲೆಯಲ್ಲಿ ಇಲ್ಲ.ಆದರೆ ಉತ್ತಮ ನಟನಾಗುತ್ತೇನೆ ಎಂಬ ನಂಬಿಕೆ ಇದೆ ಎಂದು ಮಾತಿಗೆ ಪೂರ್ಣವಿರಾಮ ಹಾಕಿದರು. ಹರ್ಷ ಅದ್ಭುತವಾಗಿ ನೃತ್ಯ ಸಂಯೋಜಿಸಿದ್ದಾರೆ ಎಂಬುದು ಚಿತ್ರತಂಡದ ಅಭಿಪ್ರಾಯ. ಬೆಂಬಲ - ಸಲಹೆ ನೀಡಿದ ಅಣಜಿ ನಾಗರಾಜ್ ಬಗ್ಗೆಯೂ ಚಿತ್ರತಂಡ ಪ್ರಶಂಸೆಯ ಮಳೆ ಸುರಿಸಿತು. ಚಿತ್ರದ ಮಾತಿನ ಭಾಗ ಪೂರ್ಣಗೊಂಡಿದೆ.ನಾಲ್ಕು ಹಾಡುಗಳನ್ನು ಬ್ಯಾಂಕಾಕ್‌ನಲ್ಲಿ ಚಿತ್ರೀಕರಿಸಿಲಾಗಿದೆ. ಇದೊಂದು ಸಂಪೂರ್ಣ ಮಾಸ್ ಚಿತ್ರ ಎಂಬ ವಿವರಣೆ ನೀಡಿದರು ನಿರ್ದೇಶಕ ಸಂಜಯ್. ನಿರ್ಮಾಪಕ ಅಯೂಬ್, `ಕೆಲವು ದೃಶ್ಯ ಮತ್ತು ಒಂದು ಹಾಡು ಮನಸಿಗೆ ತೃಪ್ತಿ ನೀಡಲಿಲ್ಲ.

 

ಹೀಗಾಗಿ ಅವುಗಳನ್ನು ಮರು ಚಿತ್ರೀಕರಿಸಲಾಗುವುದು ಎಂದರು. ಎಲ್ಲರನ್ನೂ ಗೋಳು ಹೊಯ್ದುಕೊಳ್ಳುವ ಗಂಡು ಬೀರಿ ಹಳ್ಳಿ ಹುಡುಗಿಯಾಗಿ ರೂಪಿಕಾ ಕಾಣಿಸಿಕೊಂಡಿದ್ದಾರೆ. ನಟಿ ಶುಭಾ ಪೂಂಜಾ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.