ಶನಿವಾರ, ಮೇ 8, 2021
19 °C

ಬೀರೂರಲ್ಲಿ ಕುಡಿಯವ ನೀರಿಗೆ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನರಾಯಪಟ್ಟಣ: ತಾಲ್ಲೂಕು ಕೇಂದ್ರ ದಿಂದ 8 ಕಿಮೀ ದೂರದಲ್ಲಿರುವ ಬೀರೂರು ಗ್ರಾಮದಲ್ಲಿ ಮೂರು ತಿಂಗಳಿಂದ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದೆ.60 ಮನೆಗಳಿರುವ ಪುಟ್ಟ ಗ್ರಾಮವಾದ ಬೀರೂರು, ಅರಸೀಕೆರೆ ರಸ್ತೆಯ ಪಕ್ಕದಲ್ಲಿದೆ. ಗ್ರಾಮದಲ್ಲಿ ನಾಗೇಶ್ವರ ದೇಗುಲವಿದೆ. ಕೃಷಿ ಇಲ್ಲಿನ ಜನರ ಪ್ರಮುಖ ಕಸುಬು. ಕುಡಿಯುವ ನೀರು ಕಲ್ಪಿಸಲು ಗ್ರಾಮದಲ್ಲಿ 3 ಕಿರು ನೀರು ಸರಬರಾಜು ಯೋಜನೆ ಇತ್ತು.

ಆದರೆ ಬೇಸಿಗೆ ಆರಂಭವಾಗುತ್ತಿದ್ದಂತೆ ಇವುಗಳಿಗೆ ಸಂಪರ್ಕ ಕಲ್ಪಿಸಿದ್ದ ಕೊಳವೆ ಬಾವಿ ಹದಗೆಟ್ಟಿತು. ಹಾಗಾಗಿ ನೀರಿಗೆ ತತ್ವಾರ ಉಂಟಾಗಿದೆ. ಬಟ್ಟೆ, ಪಾತ್ರೆ ತೊಳೆಯಲು. ಸ್ನಾನ ಮಾಡಲು ಅಷ್ಟು ಮಾತ್ರವಲ್ಲ ಬಹಿರ್ದೆಸೆಗೆ ಹೋಗಲು ನೀರಿಗೆ ಪರದಾಡುವಂತಾಗಿದೆ.ಜಾನುವಾರುಗಳಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ. ಅಂದಿನಿಂದ ಬರಗೂರು ಗ್ರಾ.ಪಂ. ವತಿಯಿಂದ ಲಾರಿಯಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ. ಇದು ಸಾಕಾಗುತ್ತಿಲ್ಲ. ಖಾಸಗಿ ತೋಟಗಳಿಂದ ಸೈಕಲ್‌ಗಳಲ್ಲಿ ನೀರು ತರಬೇಕಿದೆ. ಸುತ್ತಲಿನ ಯಾವ ಗ್ರಾಮದ ಕೆರೆಯಲ್ಲೂ ಒಂದು ತೊಟ್ಟು ನೀರು ಇಲ್ಲ. ಅಲ್ಲಿ ನೀರಿದ್ದರೆ ಜಾನುವಾರುಗಳಿಗಾದರೂ ಕುಡಿಸಬ ಹುದಿತ್ತು ಎನ್ನುತ್ತಾರೆ ಜನತೆ.ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಗ್ರಾ.ಪಂ. ವತಿಯಿಂದ ಈಚೆಗೆ ಹೊಸದಾಗಿ ಕೊಳವೆ ಬಾವಿ ಕೊರೆಸಿದ್ದರೂ ಅದು ವಿಫಲಗೊಂಡಿ ರುವುದು

ಚಿಂತೆಗೀಡುಮಾಡಿದೆ. ಗ್ರಾಮದಲ್ಲಿ ಮತ್ತಾವುದು ಸಮಸ್ಯೆ ಅಷ್ಟಾಗಿ ಭಾದಿಸುತ್ತಿಲ್ಲ. ಕುಡಿಯುವ ನೀರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.