ಬುಧವಾರ, ಜೂನ್ 23, 2021
22 °C

ಬೀರೂರು ವೀರಭದ್ರಸ್ವಾಮಿ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀರೂರು ವೀರಭದ್ರಸ್ವಾಮಿ ರಥೋತ್ಸವ

ಬೀರೂರು: ಪಟ್ಟಣದ ಆರಾಧ್ಯ ದೈವ ವೀರಭದ್ರಸ್ವಾಮಿಯವರ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.ಬೀರೂರಿನ ಹಳೇಪೇಟೆಯಲ್ಲಿರುವ ದೇವಾಲಯದ ಮುಂಭಾಗದಿಂದ ಸಂಜೆ 5ಗಂಟೆಗೆ ಆರಂಭಗೊಂಡ ರಥೋತ್ಸ ವವು ಮಹಾನವಮಿ ಬಯಲಿನವರೆಗೆ ನಡೆಯಿತು. ಉತ್ಸವದಲ್ಲಿ ಜಾನಪದ ವಾದ್ಯಗಳು, ವೀರಗಾಸೆ, ನಂದಿಧ್ವಜ ಕುಣಿತ, ನಾಸಿಕ್ ಬ್ಯಾಂಡ್ ಮುಂತಾದ ಕಲಾಪ್ರದರ್ಶನಗಳು ಭಕ್ತರ ಉತ್ಸಾಹ ಇಮ್ಮಡಿಗೊಳಿಸಿದವು.

 

ರಥಕ್ಕೆ ಬಾಳೆ ಹಣ್ಣು, ಕಿತ್ತಲೆಹಣ್ಣು, ಎಸೆಯುತ್ತಾ ನೆರೆದಿದ್ದ ಸಹಸ್ರಾರು ಭಕ್ತರ  ವೀರಭದ್ರಸ್ವಾಮಿಯವರಿಗೆ ಜೈ.., ಭದ್ರಕಾಳಿ ಅಮ್ಮನವರಿಗೆ ಜಯ ವಾಗಲಿ..,  ಎಂಬ ಉದ್ಘೋಷಗಳ ನಡುವೆ ರಥವು ದೇವಾಲಯದ ಬಳಿಗೆ ಬಂದು ತಲುಪಿತು. ಹರಕೆ ಹೊತ್ತ ಮಕ್ಕಳನ್ನು ರಥದ ಸುತ್ತ  ದಿಂಡುರುಳಿಸಲಾಯಿತು. ಶುಕ್ರವಾರ ಓಕಳಿ ಸೇವೆ ಶನಿವಾರ ಸಾರ್ವಜನಿಕ ಮೆರವಣಿಗೆಯೊಂದಿಗೆ ರಥೋತ್ಸವ ಮುಕ್ತಾಯಗೊಳ್ಳಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.