ಬೀವರ್

7

ಬೀವರ್

Published:
Updated:

ಯಾವಾಗಲೂ ಮರದ ಕಾಂಡಗಳನ್ನು ಕೆತ್ತುತ್ತಾ ಇರುವ ಶ್ರಮಜೀವಿ ಪ್ರಾಣಿ ಇದು. ಇದರ ಹೆಸರು ಬೀವರ್. ಇದೊಂದು ಪುಟ್ಟ ಪ್ರಾಣಿ. ಮೈತುಂಬಾ ಪೊದೆಗೂದಲು ಇದ್ದರೂ ಬಾಲ ಮಾತ್ರ ಚಪ್ಪಟೆಯಾದ ಚರ್ಮದ್ದು. ಅದು ದೋಣಿ ನಡೆಸುವ ಹುಟ್ಟಿನಂತೆ ಕಾಣುತ್ತದೆ. ಅದಕ್ಕೆ ಬಲಶಾಲಿಯಾದ, ಚೂಪಾದ ಹಲ್ಲುಗಳಿವೆ. ಅದರಿಂದ ಅದು ಮರವನ್ನು ಕತ್ತರಿಸಬಲ್ಲದು. ಕೊಂಬೆಗಳನ್ನು ತುಂಡು ತುಂಡು ಮಾಡಿ ಮನೆ ಕಟ್ಟಿಕೊಳ್ಳುವ ಅದು, ನದಿ ನೀರು ದಾಟಲೂ ಕೂಡ ಮರದ ಕೊಂಬೆಯ ಸಹಾಯ ಪಡೆಯುತ್ತದೆ.ಮರದ ತೊಗಟೆಯೇ ಅದರ ಆಹಾರ. ಉತ್ತರ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಕಂಡುಬರುವ ಈ ಸುಂದರ ಪುಟಾಣಿ ಪ್ರಾಣಿಯ ತುಪ್ಪಳದಿಂದ ಮಾಡಿದ ಟೋಪಿಗಳು ಮತ್ತು ಜಾಕೆಟ್‌ಗಳು ಜನಪ್ರಿಯ. ಅದಕ್ಕಾಗಿ ಅವುಗಳನ್ನು ಕೊಲ್ಲಲಾಗುತ್ತಿದೆ. ಸದ್ಯ ಎಚ್ಚೆತ್ತುಕೊಂಡಿರುವ ಸರ್ಕಾರ ಅವುಗಳ ಬೇಟೆಯನ್ನು ನಿಷೇಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry