ಭಾನುವಾರ, ಜೂನ್ 20, 2021
20 °C

ಬುಡಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನಗರ ಅಭಿವೃದ್ಧಿಗೆ ಹೊಸ ಸಿಡಿಪಿ ಸಿದ್ಧಗೊಳಿಸದ ಬೆಳಗಾವಿ ಬುಡಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಬುಡಾ ಸಮಿತಿ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ನವ ನಿರ್ಮಾಣ ಪಡೆಯ ಕಾರ್ಯಕರ್ತರು ಶುಕ್ರವಾರ ಬುಡಾ ಕಚೇರಿಗೆ ಮುತ್ತಿಗೆ ಹಾಕಿದರು.ರಾಜ್ಯದ ಮಹಾನಗರಗಳಾದ ಗುಲ್ಬರ್ಗ ಹಾಗೂ ಮೈಸೂರು ನಗರ ಅಭಿವದ್ಧಿ ಪ್ರಾಧಿಕಾರಗಳು ಕಳೆದ 10 ವರ್ಷಗಳ ಹಿಂದೆಯೇ ನಗರದ ಬೆಳವಣಿಗೆ ಹಾಗೂ ಭವಿಷ್ಯವನ್ನು ಆಧರಿಸಿ ಹೊಸ ಸಿಡಿಪಿಯನ್ನು (ಸಿಟಿ ಡೆವಲೆಪ್‌ಮೆಂಟ್ ಪ್ಲ್ಯಾನ್) ಸಿದ್ಧಪಡಿದ್ದಾರೆ. ಆದರೆ ಈ ಕೆಲಸ ಬೆಳಗಾವಿಯಲ್ಲಿ ಆಗಿಲ್ಲ ಎಂದು ದೂರಿದರು.ಬೆಳಗಾವಿ ನಗರಾಭಿವೃದ್ದಿ ಪ್ರಾಧಿಕಾ ರದ ಅಧ್ಯಕ್ಷರು ಮತ್ತು ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಮುಗ್ಧ ರೈತರ ಜಮೀನು ಲಪಟಾಯಿ ಸುವ ಉದ್ದೇಶದಿಂದ ಹೊಸ ಸಿಡಿಪಿ ಯನ್ನು ಸಿದ್ಧಗೊಳಿಸಿಲ್ಲ. ರಿಯಲ್ ಎಸ್ಟೇಟ್ ಮಾಫಿಯಾಗೆ ಪರೋಕ್ಷವಾಗಿ ಸಹಾಯ ಮಾಡುತ್ತಿರುವ ಬುಡಾ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ನಗರಾಭಿವದ್ಧಿ ಇಲಾಖೆಯು ಹೊಸ ಸಿಡಿಪಿಯನ್ನು ರಚಿಸಲು ಸೂಚನೆ ನೀಡಿದೆ. ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಕಾಲಾವಕಾಶ ನೀಡಲಾಗು ತ್ತದೆ ಎಂದು ಪಡೆಯ ಅಧ್ಯಕ್ಷ ರಾಜೀವ ಟೋಪಣ್ಣವರ ಆರೋಪಿಸಿದರು.ಬೆಳಗಾವಿಯ ಸುವರ್ಣ ವಿಧಾನ ಸೌಧ ಕಟ್ಟಡದ ಸುತ್ತ ಮುತ್ತಲಿನ ಒಂದು  ಕಿಲೋ ಮೀಟರ್ ವ್ಯಾಪ್ತಿ ಯನ್ನು ಹಸಿರು ವಲಯವೆಂದು ಘೋಷಿಸುವಂತೆ ಬುಡಾ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.ಆದರೆ ಸರಕಾರ ಇನ್ನೂವರೆಗೆ ಹಸಿರು ವಲಯವೆಂದು ಘೋಷಣೆ ಮಾಡದಿ ದ್ದರೂ ಕೆಲವು ಜನಪ್ರತಿನಿ ಧಿಗಳು ಮುಗ್ಧ ರೈತರಿಗೆ ಹಸಿರು ವಲಯ ಮಾಡಲಾ ಗುವುದು ಎಂದು ಬೆದರಿಸಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜಮೀನುಗಳನ್ನು ಖರೀದಿ ಮಾಡುತ್ತಿದ್ದಾರೆ ಎಂದು ದೂರಿದರು. ದೀಪಕ  ಪಾಷಾ, ಮುನ್ನಾ ಶೇಖ್, ಚಿದಾನಂದ ಮತ್ತಿತರರು ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.