ಭಾನುವಾರ, ಮೇ 16, 2021
27 °C

ಬುಡ್ಗ ಜಂಗಮರ ಸಮ್ಮೇಳನ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: `ಬುಡ್ಗ ಜಂಗಮ ನೌಕರರ ರಾಜ್ಯಮಟ್ಟದ ಸಮ್ಮೇಳನ ಹಾಗೂ ವಿಚಾರಸಂಕಿರಣ ಸೆ. 25ರಂದು ಕರ್ನಾ ಟಕ ವಿದ್ಯಾವರ್ಧಕ ಸಂಘದಲ್ಲಿ ಹಮ್ಮಿಕೊಳ್ಳಲಾಗಿದೆ~ ಎಂದು ಸಮ್ಮೇಳನದ ಸಂಚಾಲಕ ಪ್ರತಾಪ ಬಹುರೂಪಿ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಡ್ಗ ಜಂಗಮರು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ವಾಗಿ ಹಿಂದುಳಿದವರು. ಸರ್ಕಾರದ ಸೌಲಭ್ಯಗಳು ಈ ಸಮಾ ಜದವರಿಗೆ ಸಿಕ್ಕಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಿ ಮುಂದಿನ ಹೋರಟದ ರೂಪರೇಷೆಗಳನ್ನು ಸಿದ್ಧ ಪಡಿಸಲಾಗುವುದು ಎಂದರು.ರಾಜ್ಯದ ವಿವಿಧ ಪ್ರದೇಶಗಳಲ್ಲಿ ಈ ಸಮಾಜದವರಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದವರ ಸಮೀಕ್ಷೆ ಪ್ರಕಾರ ರಾಜ್ಯ ದಲ್ಲಿ 24000 ಜನಸಂಖ್ಯೆ ಇದೆ. ಬುಡ್ಗ ಜಂಗಮರು ಅಲೆ ಮಾರಿ ಜನಾಂಗದವರಾಗಿದ್ದು, ಇವರಿಗೆ ವಸತಿ ಸೌಕರ್ಯ, ಪಡಿತರ ಚೀಟಿ ಸಹ ಇಲ್ಲ. ಆದ್ದರಿಂದ ಶಾಶ್ವತವಾದ ಸೂರು, ಪಡಿತರ ಚೀಟಿ ಒದಗಿಸಬೇಕು ಎಂದು ಅವರು ಒತ್ತಾ ಯಿಸಿದರು.ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಬೆಳಿಗ್ಗೆ 10.30ಕ್ಕೆ ಡಾ. ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ವಿಶ್ರಾಂತ ಕುಲಪತಿ ಡಾ. ಎಂ.ಎಂ.ಕಲಬುರ್ಗಿ ಉದ್ಘಾಟಿಸುವರು.ಹಿಂದುಳಿದ ವರ್ಗಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕನಾಥ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಡಾ. ಕೆ.ಆರ್.ದುರ್ಗಾದಾಸ್, ಡಾ. ಕೆ.ಎಂ.ಮೇತ್ರಿ, ಶೇಷಪ್ಪ ಅಂದೋಳ್ಳು ಆಗಮಿಸುವರು ಎಂದು ಹೇಳಿದರು.ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಸಮಾರಂಭ ದಲ್ಲಿ ಪ್ರೊ. ಎಸ್.ಜಿ.ಸಿದ್ಧರಾಮಯ್ಯ ಅವರಿಗೆ ಬುಡ್ಗಶ್ರೀ, ನಾಡೋಜ ಬುರ‌್ರ ಕಥಾ ಈರಮ್ಮ ಅವರಿಗೆ ಬುಡ್ಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಚ್.ಬಿ.ವಾಲೀಕಾರ ಪ್ರಶಸ್ತಿ ಪ್ರದಾನ ಮಾಡುವರು. ಶಾಸಕ ಬಸವರಾಜ ಹೊರಟ್ಟಿ ಸಮಾರೋಪ ಭಾಷಣ ಮಾಡುವರು. ವಿ.ಶ್ರೀನಿವಾಸ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎಲ್.ಹನುಮಂತಯ್ಯ, ಮೋಹನ ನಾಗಮ್ಮನವರ, ಶಶಿಧರ ಸಾಲಿ, ಸಿದ್ಧಲಿಂಗ ದೇಸಾಯಿ, ಶಶಿಧರ ತೋಟಕರ, ಡಿ.ಶಿವಶಂಕರ ಆಗಮಿಸುವರು ಎಂದು ವಿವರಿಸಿದರು. ವಿ.ಶ್ರೀನಿವಾಸ, ಮೋಹನ ನಾಗಮ್ಮನವರ ಪತ್ರಿಕಾಗೋಷ್ಠಿ ಯಲ್ಲಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.