ಬುದ್ನಿ ತಂಡಕ್ಕೆ ಪಾರಿಜಾತ ಶ್ರೀ ಪ್ರಶಸ್ತಿ

7

ಬುದ್ನಿ ತಂಡಕ್ಕೆ ಪಾರಿಜಾತ ಶ್ರೀ ಪ್ರಶಸ್ತಿ

Published:
Updated:

ಕುಲಗೋಡ (ಮೂಡಲಗಿ): ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಬುದ್ನಿ ಪಿ.ಎಂ ಗ್ರಾಮದ ಬಸವೇಶ್ವರ ಪಗಡೆ ತಂಡ, ಇಲ್ಲಿನ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಪಗಡೆ ಟೂರ್ನಿಯ ಪ್ರಶಸ್ತಿಯನ್ನು ಬಗಲಿಗೆ ಹಾಕಿಕೊಂಡಿತು. ತಂಡಕ್ಕೆ `ಪಾರಿಜಾತ ಶ್ರೀ~ ಪ್ರಶಸ್ತಿ  ಹಾಗೂ 55,555 ರೂಪಾಯಿ ನಗದು ಬಹುಮಾನವಾಗಿ ನೀಡಲಾಯಿತು.ದ್ವಿತೀಯ ಸ್ಥಾನವನ್ನು ಜಮಖಂಡಿ ತಾಲ್ಲೂಕಿನ ಸೂರಪಾಲಿ ಗ್ರಾಮದ ಬಸವೇಶ್ವರ ಪಗಡೆ ತಂಡ ಗಳಿಸಿದ್ದು  22,222 ರೂಪಾಯಿ ನಗದು ಮತ್ತು ಪಾರಿತೋಷಕವನ್ನು ಪಡೆದುಕೊಂಡಿತು. ತೃತೀಯ ಸ್ಥಾನ ಗಳಿಸಿದ ಶಿಗ್ಗಾಂವ ತಾಲ್ಲೂಕಿನ ಅತ್ತಿಗೇರಿ ಗ್ರಾಮದ ವೀರಭದ್ರೇಶ್ವರ ಪಗಡೆ ತಂಡಕ್ಕೆ 11,111 ರೂಪಾಯಿ ನಗದು ಹಾಗೂ ಪಾರಿತೋಷವನ್ನು ನೀಡಲಾಯಿತು.ಧಾರವಾಡ ಜಿಲ್ಲೆಯ ಮೊರಬದ ಕಾಮನನ ಪಗಡೆ ತಂಡ (4), ಸವದತ್ತಿ ತಾಲ್ಲೂಕಿನ ಅಸುಂಡಿ ಗ್ರಾಮದ ಜೈ ಹನುಮಾನ್ ಪಗಡೆ ತಂಡ (5), ಚಿಕ್ಕೋಡಿ ತಾಲ್ಲೂಕಿನ ಬೆನ್ನಾಡಿ ಗ್ರಾಮದ ಬಸವೇಶ್ವರ ಪಗಡೆ ತಂಡ (6), ಸವದತ್ತಿ ತಾಲ್ಲೂಕಿನ ಹಿರೇಕುಂಬಿ ಗ್ರಾಮದ ಅಮೋಘ ಸಿದ್ಧೇಶ್ವರ ಪಗಡೆ ತಂಡ (7) ಹಾಗೂ ಗೋಕಾಕ ತಾಲ್ಲೂಕಿನ ಬುಲಕುಂದಿ ಗ್ರಾಮದ ಬಸವೇಶ್ವರ ಪಗಡೆ ತಂಡ (8) ಇತರ ಬಹುಮಾನಗಳನ್ನು ಪಡೆದುಕೊಂಡಿತು.

ನೇತಾಜಿ ಜಯಂತಿಮುನ್ಯಾಳ (ಮೂಡಲಗಿ): ಗ್ರಾಮದ ಮುನ್ಯಾಳ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನೇತಾಜಿ ಸುಭಾಷಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು.ಶಾಲೆಯ ಮುಖ್ಯ ಶಿಕ್ಷಕ ಸಿದ್ರಾಮ್ ಲೋಕನ್ನವರ ಮಾತನಾಡಿ `ನೇತಾಜಿ ಸ್ವಾತಂತ್ರ್ಯದ ನಿಜವಾದ ಅರ್ಥ ತಿಳಿಸಿ, ದೇಶಾಭಿಮಾನದ ಕಹಳೆಯನ್ನು ಊದಿದ ಅತ್ಯಂತ ಧೈರ್ಯಶಾಲಿ ರಾಷ್ಟ್ರ ನಾಯಕ~ ಎಂದರು.ಸವಿತಾ ಮುಗಳಖೋಡ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ವಿದ್ಯಾರ್ಥಿಗಳು ಹಾಜರಿದ್ದರು. ಶಿಕ್ಷಕ ಕೆ.ಜಿ. ಜೋಶಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry