ಬುಧವಾರ, 10-10-1962

7

ಬುಧವಾರ, 10-10-1962

Published:
Updated:

ವೈಭವಪೂರ್ಣ ಜಂಬೂಸವಾರಿ

ಮೈಸೂರು, ಅ. 9-
ಮೆರವಣಿಗೆಯ ಮೂರು ಮೈಲಿಗಳ ಹಾದಿಯುದ್ದಕ್ಕೂ ಕಿಕ್ಕಿರಿದು ತುಂಬಿದ ಐದು ಲಕ್ಷಕ್ಕೂ ಹೆಚ್ಚು ಮಂದಿ, ಜಗತ್‌ಪ್ರಸಿದ್ಧ ಹಾಗೂ ವೈಭವಯುತ ಜಂಬೂಸವಾರಿಯನ್ನು ಇಂದು ಇಲ್ಲಿ ವೀಕ್ಷಿಸಿ ತಮ್ಮ ಅಪಾರ ಮೆಚ್ಚಿಗೆ, ಆನಂದವನ್ನು ವ್ಯಕ್ತಪಡಿಸಿದರು.ಶರಾವತಿ ಪ್ರಗತಿ ಪರಿಶೀಲಿಸಲು ತಜ್ಞರ ತಂಡ

ಬೆಂಗಳೂರು, ಅ. 9-
ಶರಾವತಿ ವಿದ್ಯುತ್ ಯೋಜನೆಯ ಕಾರ್ಯಾಚರಣೆಯನ್ನು ಪರಿಶೀಲಿಸಲು ಯೋಜನಾ ಮಂಡಳಿ ನಿಯೋಜಿಸಿರುವ 3 ಮಂದಿ ತಜ್ಞರ ತಂಡಕ್ಕೆ ಸೇರಿದ ಶ್ರೀ ಎಂ.ಕೆ. ಮತ್ರಾಣಿ ಮತ್ತು ಎಸ್.ಎನ್. ಕಪೂರ್ ಅವರು ಇಂದು ನಗರಕ್ಕೆ ಆಗಮಿಸಿದರು.ಈ ಇಬ್ಬರು ತಜ್ಞರು, ರಾಜ್ಯದ ಜಲವಿದ್ಯುತ್ ನಿರ್ಮಾಣ ಯೋಜನೆ ಬೋರ್ಡಿನ ಸದಸ್ಯರಾದ ಶ್ರೀ ಎನ್.ಎನ್. ಅಯ್ಯಂಗಾರ್ ಅವರು ಯೋಜನೆ ಸ್ಥಳಕ್ಕೆ ಭೇಟಿ ಕೊಡುವ ಮುನ್ನ ಮುಖ್ಯಮಂತ್ರಿ ಮತ್ತಿತರರೊಡನೆ ಮಾತುಕತೆ ನಡೆಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry