ಶನಿವಾರ, ನವೆಂಬರ್ 23, 2019
18 °C

ಬುಧವಾರ, 10-4-1963

Published:
Updated:

ನದಿ ನೀರು ಹಂಚಿಕೆ: `ಇನ್ನೂ ತೆರೆದ ಪ್ರಶ್ನೆ': ಮುಖ್ಯಮಂತ್ರಿ

ಬೆಂಗಳೂರು, ಏ. 9- `ಕೃಷ್ಣಾ- ಗೋದಾವರಿ ನದಿಗಳ ನೀರು ಹಂಚಿಕೆಯ ಪ್ರಶ್ನೆ ಇನ್ನೂ ತೆರೆದ ವಿಷಯ' ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ವಿಧಾನ ಭೆಯಲ್ಲಿ ಶ್ರೀ ಡಿ. ಎಂ. ಸಿದ್ದಯ್ಯ ಅವರಿಗೆ ತಿಳಿಸಿದರು.ಶ್ರೀ ಅಣ್ಣಾರಾವ್ ಗಣಮುಖಿ ಅವರ ಪ್ರಶ್ನೆಯ ಮೂಲಕ ನದಿಗಳ ನೀರು ಹಂಚಿಕೆಯ ವಿಷಯ ಇಂದು ಮತ್ತೆ ಪ್ರಸ್ತಾಪಕ್ಕೆ ಬಂತು.ಶರಾವತಿ ಪ್ರದೇಶದಲ್ಲಿ ಸಿಡುಬಿನ ಉಪದ್ರವ

ಬೆಂಗಳೂರು, ಏ. 9- ಶರಾವರಿ ಯೋಜನೆ ಪ್ರದೇಶವನ್ನು ಸಿಡುಬು ಹಾವಳಿ ಪ್ರದೇಶವೆಂದು ಸಾರಲಾಗಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಇಂದು ವಿಧಾನ ಸಭೆಗೆ ತಿಳಿಸಿದರು.ಸೋಷಲಿಸ್ಟ್ ಸದಸ್ಯ ಶ್ರೀ ಎಸ್. ಗೋಪಾಲಗೌಡ ಅವರು ಸಿಡುಬಿನ ಉಪದ್ರವದ ಬಗ್ಗೆ ಸರ್ಕಾರದ ಗಮನ ಸೆಳೆದಾಗ ಮುಖ್ಯಮಂತ್ರಿಯವರು ಅಲ್ಲಿನ ಪರಿಸ್ಥಿತಿ ವಿವರಿಸಿ 40 ಜನರಿಗೆ ಸಿಡುಬು ತಗುಲಿ 10 ಜನರು ಮೃತಪಟ್ಟಿರುವರೆಂದೂ ತಿಳಿಸಿದರು.

ಪ್ರತಿಕ್ರಿಯಿಸಿ (+)