ಶುಕ್ರವಾರ, ಜೂನ್ 25, 2021
22 °C

ಬುಧವಾರ, 11–3–1964

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲವು ಸರಕುಗಳ ಮೇಲೆ ಹತೋಟಿ: ಟಿ.ಟಿ.ಕೆ. ಅವರ ಎಚ್ಚರಿಕೆ

ನವದೆಹಲಿ, ಮಾ. 10 – ಕೆಲವು ಪದಾರ್ಥ­­ಗಳ ಅಭಾವವು ಮುಂದುವರಿ­ದಲ್ಲಿ ಹಂಚಿಕೆಯ ಮೇಲೆ ಯಾವುದಾ­ದರೂ ರೀತಿಯ ಹತೋಟಿ­ಗಳನ್ನು ಅವು ಎಷ್ಟೇ ಅಹಿತಕರವಾಗಿದ್ದರೂ, ಹಾಕು­ವುದಕ್ಕೆ ಜನರು ಸಿದ್ಧರಾಗಿರಬೇಕೆಂದು ಅರ್ಥ ಸಚಿವ ಶ್ರೀ ಟಿ. ಟಿ. ಕೃಷ್ಣ­ಮಾಚಾರಿ ಅವರು ಇಂದು ರಾಷ್ಟ್ರಕ್ಕೆ ಎಚ್ಚರಿಕೆ ನೀಡಿದರು.ಆಯವ್ಯಯಕ್ಕೆ ಸಂಬಂಧಿಸಿದ ನೀತಿ­ಗಳನ್ನು ಬಿಟ್ಟು ಇತರ ನೀತಿಗಳ ಪ್ರಮುಖ ಪುನರ್‌ ಪರಿಶೀಲನೆಯಿಂದ ಮಾತ್ರ ಏರು­ತ್ತಿ­ರುವ ಬೆಲೆಗಳ ಸಮಸ್ಯೆಯನ್ನು  ನಿವಾರಿ­ಸ­ಬಹುದೆಂದೂ ರಾಜ್ಯಗಳ ಸರ್ಕಾರ­­ಗ­ಳೊಡನೆ ಸಮಾಲೋಚಿಸಿ, ಈ ಪುನರ್‌ ಪರಿಶೀಲನೆಯನ್ನು ಮಾಡ­ಲಾಗು­ತ್ತಿದೆಯೆಂದೂ ಅವರು ಹೇಳಿದರು.ಕೃಷ್ಣಾ ನೀರಿನಲ್ಲಿ ನ್ಯಾಯವಾದ ಪಾಲಿಗೆ ವಿವಾದ ಹೂಡಲು ವಿಧಾನಸಭೆಯಲ್ಲಿ ಸಲಹೆ

ಬೆಂಗಳೂರು, ಮಾ. 10 – 
ಕೃಷ್ಣಾ ನೀರಿ­ನಲ್ಲಿ ರಾಜ್ಯದ ನ್ಯಾಯವಾದ ಪಾಲನ್ನು ಪಡೆಯದಿದ್ದಲ್ಲಿ ಗಂಡಾಂತ­ರ­ವಿದೆ­­ಯೆಂದು ಇಂದು ವಿಧಾನ ಸಭೆ­ಯಲ್ಲಿ ಎಚ್ಚರಿಕೆ ನೀಡಿದ ಶ್ರೀ ಎಂ.ಎನ್‌. ನಾಗ­­ನೂರ್‌ ಅವರು, ನೀರಿನ ಪಾಲನ್ನು ಪಡೆಯಲು ಅಗತ್ಯವಾದಲ್ಲಿ ಅಂತರ­ರಾಜ್ಯ ನದಿ ನೀರು ಹಂಚಿಕೆಯ ವಿವಾದವನ್ನು ಹೂಡಬೇಕೆಂದು ಒತ್ತಾಯಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.