ಬುಧವಾರ, 12-10-1961

7

ಬುಧವಾರ, 12-10-1961

Published:
Updated:

ಮೈಸೂರು, ಮಹಾರಾಷ್ಟ್ರಗಳ ಭಿನ್ನಮತ ಹಾಗೇ ಇದೆ

ಮುಂಬೈ, ಅ. 11 - ಗಡಿ ವಿವಾದದ ಬಗ್ಗೆ ಮೈಸೂರು ಮತ್ತು ಮಹಾರಾಷ್ಟ್ರ ರಾಜ್ಯಗಳ ಬೇರೆ ಬೇರೆಯಾದ ಅಭಿಪ್ರಾಯಗಳನ್ನು ಹೊಂದಾಣಿಕೆ ಮಾಡಲು ಸಾಧ್ಯವಿಲ್ಲವೆಂದೂ, ಈವರೆಗೆ ಈ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಯಾವ ಪ್ರಗತಿಯನ್ನೂ ಸಾಧಿಸಿಲ್ಲವೆಂದೂ ಮಧ್ಯಪ್ರದೇಶದ ರಾಜ್ಯಪಾಲರಾದ ಶ್ರೀ ಎಚ್. ವಿ. ಪಾಟಿಸ್ಕರ್ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ನಗರಕ್ಕೆ ಲಾರಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರು

ಬೆಂಗಳೂರು, ಅ. 11 - ದೆಹಲಿಗೆ ವಿಮಾನದಲ್ಲಿ ತೆರಳಲು ಇಂದು ಅನಂತಪುರದ ಬಳಿಯಿರುವ ತಮ್ಮ ಸ್ಥಳದಿಂದ ಹೊರಟ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎನ್. ಸಂಜೀವರೆಡ್ಡಿ ಅವರು ತಮ್ಮ ಕಾರು ನಗರಕ್ಕೆ 75 ಮೈಲಿ ದೂರದಲ್ಲಿ ಕೆಟ್ಟು ಹೋದ ಕಾರಣ ಲಾರಿಯೊಂದರಲ್ಲಿ ಪ್ರಯಾಣ ಮಾಡಿ ನಗರವನ್ನು ತಲುಪಿದರು.

ಮಧ್ಯಾಹ್ನ ದೆಹಲಿಗೆ ಹೊರಡುವ ವಿಮಾನ ವಿಳಂಬವಾಗಿ ಹೊರಟ ಕಾರಣ ಕಾಂಗ್ರೆಸ್ ಅಧ್ಯಕ್ಷರಿಗೆ ವಿಮಾನ ಸಿಕ್ಕಿ ಅವರು ದೆಹಲಿಗೆ ಪ್ರಯಾಣ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry