ಮಂಗಳವಾರ, ಮೇ 18, 2021
28 °C

ಬುಧವಾರ, 19-6-1963

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಶ್ಮೀರ ವಿಭಜನೆಗೆ ಭಾರತ ಒಪ್ಪದು

ಶ್ರೀನಗರ, ಜೂನ್ 18 -  ಕಾಶ್ಮೀರ ವಿವಾದಕ್ಕೆ ಪರಿಹಾರ ಕ್ರಮವಾಗಿ ಕಾಶ್ಮೀರವನ್ನು ವಿಭಜಿಸುವ ಅಥವಾ ಅಂತರರಾಷ್ಟ್ರೀಯ ಆಡಳಿತಕ್ಕೊಳಪಡಿಸುವ ಸಲಹೆಗಳನ್ನು ಪ್ರಧಾನ ಮಂತ್ರಿ ನೆಹರೂ ಇಂದು ಸ್ಪಷ್ಟವಾಗಿ ತಿರಸ್ಕರಿಸಿದರು. ಕಳೆದ ಬಾರಿಯ ಭಾರತ ಪಾಕಿಸ್ತಾನ ಮಾತುಕತೆಗಳಲ್ಲೂ ಪಶ್ಚಿಮ ರಾಷ್ಟ್ರಗಳಿಗೂ ತಾವು ಇದನ್ನು ಸ್ಪಷ್ಟಪಡಿಸಿರುವುದಾಗಿ ನೆಹರೂ ನುಡಿದರು.ಬೈಕೊವ್‌ಸ್ಕಿ: ಹೊಸ ದಾಖಲೆ

ಮಾಸ್ಕೋ, ಜೂನ್ 18 - ಹೆಚ್ಚು ಕಾಲ ಅಂತರಿಕ್ಷಯಾನ ಮಾಡುವುದರಲ್ಲಿ ಸೋವಿಯತ್ ಗಗನಯಾತ್ರಿ ಲೆ/ ಕ/ ವ್ಯಾಲೆರಿ ಬೈಕೊವ್‌ಸ್ಕಿ ಹೊಸ ದಾಖಲೆಯೊಂದನ್ನು ಸ್ಥಾಪಿಸಿರುವರೆಂದು ಈ ದಿನ ಇಲ್ಲಿ ಪ್ರಕಟಿಸಲಾಯಿತು.

ಇನ್ನೊಬ್ಬ ಸೋವಿಯತ್ ಅಂತರಿಕ್ಷಯಾತ್ರಿ ಮೇಜರ್ ಆಂಡ್ರಿಯಾನ್ ನಿಕೊಲಯೆವ್ ಮೂರು ದಿನ, 22 ಗಂಟೆ, 22 ನಿಮಿಷ ಅಂತರಿಕ್ಷಯಾನ ಮಾಡಿದ್ದ ದಾಖಲೆಯನ್ನು ಬೈಕೊವ್‌ಸ್ಕಿ ಇಂದು ಮಧ್ಯಾಹ್ನ ಮುರಿದು ತಮ್ಮ ಪರ್ಯಟನ ಮುಂದುವರಿಸಿದರು.ಲೋಕಸಭೆಯಲ್ಲಿ ರಾಜ್ಯಕ್ಕೆ ಒಂದು ಹೆಚ್ಚು ಸ್ಥಾನ

ಬೆಂಗಳೂರು, ಜೂನ್ 18 - ಮೈಸೂರು ರಾಜ್ಯಕ್ಕೆ ಲೋಕ ಸಭೆಯಲ್ಲಿ ಒಂದು ಸ್ಥಾನ ಹೆಚ್ಚಾಗಿ ದೊರಕಲಿದೆ. ಈಗ ನಗರದಲ್ಲಿರುವ ಕ್ಷೇತ್ರ ವಿಭಜನಾ ಮಂಡಳಿಯ ನಿರ್ಧಾರದ ರೀತ್ಯ ರಾಜ್ಯದ ವಿಧಾನ ಸಭೆಯಲ್ಲೂ 8 ಸ್ಥಾನಗಳು ಹೆಚ್ಚಾದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.