ಬುಧವಾರ, 23-5-1962

7

ಬುಧವಾರ, 23-5-1962

Published:
Updated:

ಭಾರತ ರಾಯಭಾರಿ ಶಾಖೆ ವಿರುದ್ಧ ನಿರ್ಬಂಧಗಳು

ನವದೆಹಲಿ, ಮೇ 22
- ಚೀಣಾ ಮತ್ತು ಟಿಬೆಟ್‌ಗಳಲ್ಲಿ ಭಾರತದ ರಾಯಭಾರಿ ಶಾಖೆಗಳ ಕಾರ್ಯದ ವಿರುದ್ಧ ಕಠಿಣವಾದ ನಿರ್ಬಂಧಗಳು ಮುಂದುವರಿಯುತ್ತದೆ ಎಂದು ಭಾರತದ ವಿದೇಶಾಂಗ ಉಪಸಚಿವೆ ಶ್ರೀಮತಿ ಲಕ್ಷ್ಮಿ ಮೆನನ್ ಇಂದು ಲೋಕ ಸಭೆಯಲ್ಲಿ ತಿಳಿಸಿದರು.ನೊಂದ ಮಾಲೀಕರಿಗೆ ನೆರವು

ಬೆಂಗಳೂರು, ಮೇ 22
- ರಸ್ತೆ ಸಾರಿಗೆ ರಾಷ್ಟ್ರೀಕರಣದಿಂದ ಉದ್ಯಮ ಕಳೆದುಕೊಂಡ ಖಾಸಗಿ ವಾಹನಗಳ ಮಾಲೀಕರಿಗೆ ಬೇರೆ ವೃತ್ತಿಯ ಅವಕಾಶ ಕಲ್ಪಿಸುವ ಪ್ರಶ್ನೆ ಸರ್ಕಾರದ ತೀವ್ರ ಪರಿಶೀಲನೆಯಲ್ಲಿದೆಯೆಂದು ತಿಳಿದುಬಂದಿದೆ.ಡಿಗಾಲರ ಹತ್ಯೆಗೆ ಸಂಚು

ಪ್ಯಾರಿಸ್, ಮೇ 22
- ಅಧ್ಯಕ್ಷ ಡಿಗಾಲ್‌ರನ್ನು ಕೊಲೆಗೆ ರಹಸ್ಯ ಸೇನಾ ಸಂಸ್ಥೆಯ ಹಂತಕ ತಂಡ ನಡೆಸಿದ್ದ ಸಂಚನ್ನು ಪೋಲೀಸರು ವ್ಯರ್ಥಗೊಳಿಸಿದ್ದಾರೆ.ಈ ತಂಡ ಕಳೆದ ವಾರ ಅಧ್ಯಕ್ಷರು ಸಂಚರಿಸಿದ್ದ ಮಧ್ಯ ಫ್ರಾನ್ಸ್ ಪ್ರದೇಶವನ್ನು ಸಂದರ್ಶಿಸಿತ್ತೆಂದೂ, ಮೊನ್ನೆ ಬೆಳಿಗ್ಗೆ ಪ್ಯಾರಿಸಿನಲ್ಲಿ ತಂಡದ ನಾಯಕ ಮತ್ತು ಇಬ್ಬರು ಸಹಾಯಕರನ್ನೂ ದಸ್ತಗಿರಿ ಮಾಡಿರುವುದಾಗಿಯೂ ಪೋಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry