ಬುಧವಾರ, 3-10-1962

7

ಬುಧವಾರ, 3-10-1962

Published:
Updated:

ಇಂಗ್ಲಿಷ್ ಮುಂದುವರಿಕೆ ಖಚಿತ

ನವದೆಹಲಿ, ಅ. 2- ಇಂಗ್ಲಿಷ್‌ಗೆ ಸಹ ಅಧಿಕೃತ ಭಾಷೆಯ ಸ್ಥಾನಮಾನ ನೀಡುವುದಾಗಿ ಪಾರ್ಲಿಮೆಂಟಿನಲ್ಲಿ ನೀಡಿದ್ದ ಭರವಸೆಯನ್ನು, ಏನೇ ಸಂಭವಿಸಲಿ ಈಡೇರಿಸುವುದಾಗಿ ಪ್ರಧಾನಮಂತ್ರಿ ನೆಹರೂ ಅವರು ಇಲ್ಲಿ ಇಂದು ದೃಢನಿಶ್ಚಯದ ದನಿಯಲ್ಲಿ ಘೋಷಿಸಿದರು.

ಬೃಹತ್ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಶ್ರೀ ನೆಹರೂರವರು ಧ್ವನಿಯನ್ನು ಎತ್ತರಿಸಿ “ಈ ಸಂಬಂಧ ಯಾವ ಭ್ರಮೆಯೂ ಬೇಡ. ಇಂಗ್ಲಿಷ್‌ಗೆ ಸಂಬಂಧಿಸಿದಂತೆ ಅವರ ಇಚ್ಛೆಗೆ ವಿರುದ್ಧವಾದ ಯಾವುದನ್ನೂ ಮಾಡಲಾಗುವುದಿಲ್ಲವೆಂದು ದಕ್ಷಿಣ ಭಾರತದ ಜನತೆಗೆ ಪಾರ್ಲಿಮೆಂಟಿನಲ್ಲಿ ನೀಡಿದ್ದ ಆಶ್ವಾಸನೆಯನ್ನು ಪೂರೈಸಲಾಗುವುದು ಇದು ಸುಸ್ಪಷ್ಟ” ಎಂದರು.ಎರಡು ಜಿಲ್ಲೆಗಳಾಗಿ ಬೆಂಗಳೂರು

ಬೆಂಗಳೂರು, ಅ. 2- ಇದುವರೆಗೆ ಒಂದೇ ಜಿಲ್ಲೆಯಾಗಿದ್ದ ಬೆಂಗಳೂರು, ನಿನ್ನೆಯಿಂದ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಾಗಿ ರೂಪುಗೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry