ಬುಧವಾರ, 4-7-1962

ಗುರುವಾರ , ಜೂಲೈ 18, 2019
28 °C

ಬುಧವಾರ, 4-7-1962

Published:
Updated:

ಸ್ವತಂತ್ರ ಆಲ್ಜಿರಿಯ ಉದಯ

ಪ್ಯಾರಿಸ್, ಜುಲೈ 3
- ಫ್ರಾನ್ಸಿನ ಅಧ್ಯಕ್ಷ ಡಿಗಾಲ್ ಅವರು ಆಲ್ಜಿರಿಯದ ಸ್ವಾತಂತ್ರ್ಯವನ್ನು ಇಲ್ಲಿ ಇಂದು ಔಪಚಾರಿಕವಾಗಿ ಘೋಷಿಸಿದರು.ಈ ಸಂದರ್ಭದಲ್ಲಿ ಅವರು ಸಂದೇಶವೊಂದನ್ನು ಹೊರಡಿಸಿ, “ಆಲ್ಜಿರಿಯದ ಸ್ವಾತಂತ್ರ್ಯಕ್ಕೆ ಫ್ರಾನ್ಸ್ ಮನ್ನಣೆ ನೀಡುವುದೆಂದು ಫ್ರೆಂಚ್ ಗಣರಾಜ್ಯದ ಅಧ್ಯಕ್ಷರು ಘೋಷಿಸುವುದಾಗಿ” ತಿಳಿಸಿದ್ದಾರೆ.ಮೂಗಿಗಿಂತ ಮೂಗುತಿ ಭಾರ

ಬೆಂಗಳೂರು, ಜುಲೈ 3
- ಹೆಚ್ಚು ಸಿಬ್ಬಂದಿಯ ನೇಮಕವನ್ನು ನಿವಾರಿಸುವ ಹಾಗೂ ದಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಲೆಕ್ಕಾಚಾರ ಮಾಡುವ ಯಂತ್ರ ವ್ಯವಸ್ಥೆಯನ್ನು ಸ್ಥಾಪಿಸುವ ಕಾರಣವಾಗಿ ಭದ್ರಾವತಿಯಲ್ಲಿರುವ ಮೈಸೂರು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ 157 ಲಕ್ಷ ರೂ. ನಷ್ಟ ಸಂಭವಿಸಿತೆಂದು ರಾಜ್ಯ ಸರ್ಕಾರದ 1960-61ನೆ ವರ್ಷದ ಲೆಕ್ಕ ಪರಿಶೋಧನೆ ವರದಿ ತಿಳಿಸಿದೆ.`ಭಾರತಕ್ಕೆ ನೆರವು ನಿಲ್ಲಿಸುವ ಸುದ್ದಿ ಸುಳ್ಳು~

ಲಂಡನ್, ಜುಲೈ 3
- ಭಾರತಕ್ಕೆ ನೆರವು ನೀಡುವ ರಾಷ್ಟ್ರಗಳ ಸಂಘವು ಅಮೆರಿಕದ ಒತ್ತಾಯಕ್ಕೆ ಮಣಿದು ಭಾರತಕ್ಕೆ ನೆರವು ನೀಡುವುದನ್ನು ನಿಲ್ಲಿಸಲು ನಿರ್ಧರಿಸಿದೆಯೆಂಬ ವರದಿಗಳಲ್ಲಿ ಸತ್ಯಾಂಶವೇನೂ ಇಲ್ಲವೆಂದು ಭಾರತದ ಹಣಕಾಸಿನ ಮಂತ್ರಿ ಶ್ರೀ ಮೊರಾರ್ಜಿ ದೇಸಾಯಿ ಅವರು ಇಂದು ಇಲ್ಲಿ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry