ಬುಧವಾರ, 4-9-1963

7

ಬುಧವಾರ, 4-9-1963

Published:
Updated:

ಭಾರತ ವಿದೇಶಾಂಗ ನೀತಿಗೆ ರಾಜ್ಯಸಭೆ ಒಪ್ಪಿಗೆ

ನವದೆಹಲಿ, ಸೆ. 3-  `ಭಾರತದ ತಟಸ್ಥ ವಿದೇಶಾಂಗ ನೀತಿ ಅಮೂಲ್ಯವಾದದ್ದು, ಎಲ್ಲರ ಮೆಚ್ಚಿಗೆ ಹೊಂದಿರುವ ನೀತಿ. ಈ ವಿದೇಶಾಂಗ ನೀತಿಯಿಂದ ಭಾರತಕ್ಕೆ ಅಲ್ಲದೆ ವಿಶ್ವಕ್ಕು ಲಾಭವಿದೆ' ಎಂಬುದಾಗಿ ಪ್ರಧಾನ ಮಂತ್ರಿ ನೆಹರೂ ಇಂದು ರಾಜ್ಯ ಸಭೆಯಲ್ಲಿ ವಿದೇಶಾಂಗ ವ್ಯವಹಾರದ ಚರ್ಚೆಗೆ ಉತ್ತರವೀಯುತ್ತಾ ತಿಳಿಸಿದರು. ಅವರು ಉತ್ತರ ನೀಡಿದ ನಂತರ ಸರ್ಕಾರದ ವಿದೇಶಾಂಗ ನೀತಿಗೆ ಸಭೆ ಅಂಗೀಕಾರ ನೀಡಿತು.ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಟ್ಟರೆ `ಭಾರತ ಸತ್ತಂತೆ'

ನವದೆಹಲಿ, ಸೆ. 3- ಕಾಶ್ಮೀರ ರಾಜ್ಯಾಂಗ ಹಾಗೂ ನ್ಯಾಯಾಂಗ ದೃಷ್ಟಿಯಿಂದ ಪೂರ್ಣವಾಗಿ ಭಾರತದ ಭಾಗ. ಕಾಶ್ಮೀರದ ಬಗ್ಗೆ ಯಾವುದೊಂದು ಬದಲಾವಣೆಯೂ ಕಾಶ್ಮೀರ, ಭಾರತ ಹಾಗೂ ಪಾಕಿಸ್ತಾನದ ಜನತೆಗೆ ವಿನಾಶಕಾರಿ ಪರಿಣಾಮವನ್ನುಂಟು ಮಾಡೀತು. ಕಾಶ್ಮೀರವನ್ನು `ಒಂದು ತಟ್ಟೆಯಲ್ಲಿಟ್ಟು' ಪಾಕಿಸ್ತಾನಕ್ಕೆ ಕೊಟ್ಟರೆ ಆ ದಿನ `ಭಾರತ ಸತ್ತು ನಾಶವಾದಂತೆ' ಎಂಬುದಾಗಿ ಪ್ರಧಾನ ಮಂತ್ರಿ ನೆಹರೂರವರು ರಾಜ್ಯ ಸಭೆಯಲ್ಲಿ ಚರ್ಚೆಗೆ ಉತ್ತರವೀಯುತ್ತಾ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry