ಮಂಗಳವಾರ, ಮೇ 11, 2021
27 °C

ಬುರುಜನಹಟ್ಟಿ: ಬರಗೇರಮ್ಮ ಮಹಾದ್ವಾರ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಬರಗೇರಮ್ಮ ದೇವಿ ಜಾತ್ರ ಮಹೋತ್ಸವ ಪ್ರಯುಕ್ತ ನಗರದ ಬುರುಜನಹಟ್ಟಿಯ ಸಿದ್ಧರಾಮೇಶ್ವರ ವೃತ್ತದಲ್ಲಿ ನಿರ್ಮಿಸಿರುವ ಬರಗೇರಮ್ಮ ದೇವಿಯ ಮಹಾದ್ವಾರವನ್ನು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಏಕನಾಥೇಶ್ವರಿ, ಬರಗೇರಮ್ಮ, ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವತೆಗಳ ಜಾತ್ರೆಗಳು ಎಲ್ಲ ಜಾತ್ರೆಗಳಿಗೂ ಮಾದರಿಯಾಗಿವೆ ಎಂದರು.ಸಿಡಿ ಉತ್ಸವದಲ್ಲಿ ಕೊಂಡಿ ಹಾಕುವುದು ಬೇಡ. ಅದರಿಂದ ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ರೋಗಾಣುಗಳು ಹರಡುತ್ತವೆ ಎಂದು ಗುಲ್ಬರ್ಗಾದಲ್ಲಿ ಮಹಿಳೆಯರು ಸಿಡಿ ಉತ್ಸವವನ್ನು ತಡೆಹಿಡಿದಿದ್ದಾರೆ. ನಗರದಲ್ಲೂ ಹಲವಾರು ದೇವರ ಸನ್ನಿಧಿಗಳಲ್ಲಿ ಕೊಂಡಿ ಹಾಕಿ ಸಿಡಿ ಆಡಿಸುವುದು ಬೇಡ. ಅದಕ್ಕೆ ತಾವು ಹಾಗೂ ಎಲ್ಲರೂ ಸೇರಿ ಪರಿವರ್ತನೆ ಮಾಡೋಣ. ಜಾತ್ರೆಗಳನ್ನು ಸಾಂಸ್ಕೃತಿಕವಾಗಿ ಆಚರಿಸಬೇಕು ಎಂದು ತಿಳಿಸಿದರು.ಅದೇ ರೀತಿ ಕುರಿ, ಕೋಳಿಗಳನ್ನು ಬಲಿ ನೀಡುವುದು ಬೇಡ. ಎರಡು ಮೂರು ದಿನ ಮಾಂಸವನ್ನು ಇಟ್ಟುಕೊಂಡು ತಿನ್ನುವುದರಿಂದ ಹಲವಾರು ಕಾಯಿಲೆಗಳು ಬರುತ್ತವೆ. ಇದನ್ನು ಪರಿವರ್ತಿಸಿ ಒಳ್ಳೆಯ ವ್ಯವಸ್ಥೆ ಮಾಡಬೇಕು.ಸಾತ್ವಿಕ ಪರಿಸರ ಬೆಳೆಸಿಕೊಳ್ಳಬೇಕು. ಶೋಷಿತ ವರ್ಗ, ಹಿಂದುಳಿದ ವರ್ಗ ಹಾಗೂ ಮುಂದುವರಿದ ವರ್ಗಗಳು ಒಂದಾಗಿ ಒಗ್ಗಟ್ಟಿನಿಂದ ಮುನ್ನಡೆಯಬೇಕು. ಮಾಂಸಹಾರಿಗಳಿಗೆ ಮಾಂಸ ಸೇವಿಸುವುದು ಬೇಡ ಎಂದು ಹೇಳುವುದಿಲ್ಲ. ಆದರೆ, ಅದು ಒಂದು ವ್ಯವಸ್ಥೆಯಿಂದ ನಡೆಯಬೇಕು. ಅನಾರೋಗ್ಯ ಉಂಟಾಗಬಾರದು.ಪಶುಬಲಿಯೂ ಸಹ ಒಂದು ಮಡೆಸ್ನಾನದಷ್ಟೇ ಅನಾಗರಿಕ ವರ್ತನೆ. ಅದನ್ನು ಸಹ ತಡೆಯಬೇಕು ಎಂದು ಕರೆ ನೀಡಿದರು.ಓ.ಬಿ. ಬಸವರಾಜಪ್ಪ ಸ್ವಾಗತಿಸಿದರು. ಬರಗೇರಮ್ಮ ದೇವಿ ಅರ್ಚಕರಾದ ಸತ್ಯಪ್ಪ ಸಹೋದರರು ಹಾಗೂ ಕಸ್ತೂರಪ್ಪ ಸಹೋದರರು, ಜಿ. ಚಂದ್ರಪ್ಪ, ಮುರುಘರಾಜೇಂದ್ರ ಒಡೆಯರ್, ಎಚ್. ಮಂಜಪ್ಪ, ಎಂ. ಮಲ್ಲಿಕಾರ್ಜುನ್, ವಿ. ರೂಪಪ್ರಸಾದ್, ತ.ಮ. ಸಿದ್ದಲಿಂಗಪ್ಪ, ಬಿ. ನಾಗರಾಜ್, ಜಿ. ಚಿನ್ನಪ್ಪ, ಕಾವಲು ಸಿದ್ದಲಿಂಗಪ್ಪ, ಪೈಲ್ವಾನ್ ಡಿ.ವಿ. ತಿಪ್ಪೇಸ್ವಾಮಿ, ಸಿ.ಜಿ. ಶ್ರೀನಿವಾಸ್, ಎಂ. ನಿಶಾನಿ ಜಯಣ್ಣ, ಜೆ. ಸುರೇಶ್, ಯಾದವಮೂರ್ತಿ, ಎಂ.ವಿ. ಮಾಲತೇಶ್, ಕೆ.ಸಿ. ಗಿರಿರಾಜ್, ಸಿ.ಎನ್. ಪ್ರಕಾಶ್, ಜಿ. ನಾಗಪ್ಪ, ಎಚ್.ಕೆ. ಪ್ರಾಣೇಶ್, ಪಿ. ಕೃಷ್ಣಮೂರ್ತಿ, ರಾಮಣ್ಣ, ಪಿ. ನರಸಿಂಹಮೂರ್ತಿ, ಸಿ.ಎಚ್. ಶೈಲೇಂದ್ರ, ಪ್ರಸನ್ನಚಾರ್, ಜಿ.ಟಿ. ಮಂಜುನಾಥ್ ಇದ್ದರು.ಬರಗೇರಮ್ಮ ದೇವಿಯ ಮಹಾದ್ವಾರವನ್ನು ಶಿಲ್ಪಿಗಳಾದ ರಮೇಶ್, ಕಂಪಳಪ್ಪ, ಗಂಗಾಧರಪ್ಪ, ರಾಮು, ಓಂ ಕಲಾಲೋಕದವರು ನಿರ್ಮಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.