ಬುಧವಾರ, ನವೆಂಬರ್ 20, 2019
21 °C

ಬುಲ್ಲರ್ ಗೆ ಕ್ಷಮಾದಾನ: ಮಾರ್ಗೋಪಾಯ ಹುಡುಕಲು ಪ್ರಧಾನಿಗೆ ಬಾದಲ್ ಮನವಿ

Published:
Updated:

ನವದೆಹಲಿ (ಪಿಟಿಐ):ಖಲಿಸ್ತಾನ್ ವಿಮೋಚನಾ ಪಡೆಯ (ಕೆಎಲ್‌ಎಫ್) ಉಗ್ರ ದೇವಿಂದರ್‌ಪಾಲ್ ಸಿಂಗ್ ಬುಲ್ಲರ್‌ಗೆ  ಕ್ಷಮಾದಾನ ನೀಡಲು ಮಾರ್ಗೋಪಾಯಗಳನ್ನು ಹುಡುಕುವಂತೆ  ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಮಾಡಿಕೊಂಡರು.

1993ರ ದೆಹಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಉಗ್ರ ದೇವಿಂದರ್‌ಪಾಲ್ ಸಿಂಗ್ ಬುಲ್ಲರ್‌ಗೆ ವಿಧಿಸಿದ್ದ ಮರಣ ದಂಡನೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಕಾಯಂಗೊಳಿಸಿದ ಬೆನ್ನಲ್ಲೇ ಪಂಜಾಬ್ ಮುಖ್ಯಮಂತ್ರಿ  ಹಾಗೂ ಉಪ ಮುಖ್ಯಮಂತ್ರಿ, ಪ್ರಧಾನಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

`ಕ್ಷಮಾದಾನದ ಅರ್ಜಿ ಬಗ್ಗೆ ತೀರ್ಮಾನ ವಿಳಂಬವಾಗಿರುವುದರಿಂದಾಗಿ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಬೇಕೆಂದು ಬುಲ್ಲರ್ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರಿಂ ಕೋರ್ಟ್ ತಳ್ಳಿಹಾಕಿತ್ತು. `ಶಿಕ್ಷೆಯ ಪ್ರಮಾಣ ಇಳಿಸಲು ಅರ್ಜಿದಾರರು ನೀಡಿರುವ ಕಾರಣವು ಸಮರ್ಥನೀಯವಲ್ಲ' ಎಂದು ಹೇಳಿ, ದೇವಿಂದರ್ ಸಿಂಗ್ ಬುಲ್ಲರ್‌ಗೆ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ಕೋರ್ಟ್ ಕಾಯಂ ಗೊಳಿಸಿತ್ತು.

 

ಪ್ರತಿಕ್ರಿಯಿಸಿ (+)