ಬೂತ್ ಚುನಾವಣೆ: ಕಣದಲ್ಲಿ 268 ಮಂದಿ

ಶುಕ್ರವಾರ, ಮೇ 24, 2019
23 °C

ಬೂತ್ ಚುನಾವಣೆ: ಕಣದಲ್ಲಿ 268 ಮಂದಿ

Published:
Updated:

ಚಿಂತಾಮಣಿ:  ನಗರದಲ್ಲಿ ಭಾರತೀಯ ಯುವ ಕಾಂಗ್ರೆಸ್ ಬೂತ್‌ಮಟ್ಟದ ಸಮಿತಿಗಳಿಂದ ವಿಧಾನಸಭೆ, ಲೋಕಸಭೆ ಹಾಗೂ ರಾಜ್ಯಮಟ್ಟದ ಸಮಿತಿಗಳಿಗೆ ನಡೆಯುವ ಚುನಾವಣೆ ಪ್ರಕ್ರಿಯೆ ಆರಂಭ ಗೊಂಡಿದ್ದು, ಒಟ್ಟು 268 ಮಂದಿ ಕಣದಲ್ಲಿದ್ದಾರೆ.ತಾಲ್ಲೂಕಿನಲ್ಲಿ 270 ಮಂದಿ ನಾಮ ಪತ್ರ ಸಲ್ಲಿಸಿದ್ದು, ಮಂಗಳವಾರ ನಾಮ ಪತ್ರಗಳ ಪರಿಶೀಲನೆ ನಡೆದು ಎರಡು ನಾಮಪತ್ರಗಳು ತಿರಸ್ಕೃತ ಗೊಂಡವು. 268 ಮಂದಿ ಕಣದಲ್ಲಿ ಉಳಿದಿದ್ದಾರೆ. ತಾಲ್ಲೂಕಿನಲ್ಲಿ 1ರಿಂದ 175 ಬೂತ್‌ಗಳವರೆಗೆ ಸೆಪ್ಟೆಂಬರ್ 16ರಂದು ಹಾಗೂ 176ರಿಂದ 240ರ ವರೆಗೆ 17ರಂದು ಚುನಾವಣೆ ನಡೆಯಲಿದ್ದು, 1150 ಮಂದಿ ಮತ ಚಲಾವಣೆ ಮಾಡಲಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.ಈ ಚುನಾವಣೆಯಲ್ಲಿ ಆಯ್ಕೆ ಯಾಗುವ ಪದಾಧಿಕಾರಿಗಳು ವಿಧಾನ ಸಭೆ, ಲೋಕಸಭಾ ಕ್ಷೇತ್ರ ಹಾಗೂ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರ ಸ್ಥಾನಗಳಿಗೆ ಮತ ಚಲಾಯಿಸುವ ಅಧಿಕಾರ ಹೊಂದಿ ರುತ್ತಾರೆ. ಮೀಸಲು ಸ್ಥಾನಗಳಿಗೆ ನಾಮ ಪತ್ರ ಸಲ್ಲಿಸಿರುವ ಅಭ್ಯರ್ಥಿಗಳು ಅಗತ್ಯ ಜಾತಿ ಪ್ರಮಾಣ ಪತ್ರಗಳನ್ನು ಸಲ್ಲಿಸದಿದ್ದರೆ ಸಾಮಾನ್ಯ ವರ್ಗಕ್ಕೆ ಸೇರಿಸಲಾಗುವುದು ಎಂದರು.ಲೋಕಸಭಾ ಕ್ಷೇತ್ರದ ಸುರೇಶ್ ದೋರಿ, ಕೃಷ್ಣಪ್ಪನವರ್ ಚುನಾವಣೆ ಪ್ರಕ್ರಿಯೆ ಹೊಣೆ ಹೊತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry