ಶನಿವಾರ, ಮೇ 8, 2021
26 °C

ಬೃಂದಾವನಕ್ಕೆ ರಕ್ಷಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತ್ತೀಚೆಗೆ ಮೈಸೂರಿನ ಕೃಷ್ಣರಾಜ ಸಾಗರವನ್ನು ನೋಡಲು ಹೋದಾಗ ಅಲ್ಲಿನ ಭದ್ರತಾ ಅವ್ಯವಸ್ಥೆಯನ್ನು ನೋಡಿ ಆತಂಕವಾಯಿತು. ಉದ್ಯಾನದ ರಕ್ಷಣೆಯನ್ನು ಖಾಸಗಿ ಸಂಸ್ಥೆಯೊಂದಕ್ಕೆ ವಹಿಸಲಾಗಿದೆ. ವೃದ್ಧ ಸಿಬ್ಬಂದಿಯನ್ನು ಕಾವಲಿಗೆ ನೇಮಿಸಲಾಗಿದೆ.ಪ್ರವಾಸಿಗರನ್ನು ತಪಾಸಣೆ ಮಾಡಿ ಒಳಬಿಡುವ ವ್ಯವಸ್ಥೆ ಇಲ್ಲ. ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಜಲಾಶಯಗಳ ಸುತ್ತಮುತ್ತ ಹೀಗೆ ಮುಕ್ತ ಪ್ರವೇಶಕ್ಕೆ ಅವಕಾಶ ನೀಡುವುದು ಅಪಾಯಕಾರಿ ಅಲ್ಲವೇ?ಪ್ರವಾಸಿಗರನ್ನು ಅವರ ಬಳಿ ಇರುವ ವಸ್ತುಗಳನ್ನು ತಪಾಸಣೆ ಮಾಡಿ ಒಳಬಿಡುವ ವ್ಯವಸ್ಥೆಯನ್ನು ಜಾರಿಗೆ ತರುವುದು ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಅಗತ್ಯವಿದೆ. ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಆಲೋಚಿಸಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.