ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

7

ಬೃಹತ್ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

Published:
Updated:

ಮದ್ದೂರು: 18ವಿಭಾಗಗಳ ತಜ್ಞ ವೈದ್ಯರಿಂದ ಸಾವಿರಾರು ರೋಗಿಗಳ ತಪಾಸಣೆ, ಸಲಹೆ ಹಾಗೂ ಔಷಧಿಗಳ ವಿತರಣೆ. ತಾವು ವೈದ್ಯರಾಗಿ ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕವಾಯಿತು ಎಂಬ ಸಂತೃಪ್ತ ಮನೋಭಾವ..

ಇದು ಸಮೀಪದ ಬೆಸಗರಹಳ್ಳಿಯಲ್ಲಿ ಭಾನುವಾರ ಪಣ್ಣೆದೊಡ್ಡಿ ಲಿಂಗಮ್ಮ-ಎಸ್.ಬೋರಯ್ಯ ಸೇವಾ ಟ್ರಸ್ಟ್ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ಶಿಬಿರದಲ್ಲಿ ಕಂಡು ಬಂದ ಚಿತ್ರಣ. ಪಣ್ಣೆದೊಡ್ಡಿಯ ದಿ.ಎಸ್.ಬೋರಯ್ಯ ಅವರ ಕುಟುಂಬವು 20ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಒಳಗೊಂಡಿದ್ದು, ಬೋರಯ್ಯ ಅವರ ಸ್ಮರಣಾರ್ಥ ಇದೇ ಮೊದಲ ಬಾರಿಗೆ ಬೃಹತ್ ಆರೋಗ್ಯ ಶಿಬಿರ ಸಂಘಟಿಸಿತ್ತು.ವೈದ್ಯಕೀಯ, ಶಸ್ತ್ರ ಚಿಕಿತ್ಸೆ, ಸ್ತ್ರೀರೋಗ, ಬಂಜೆತನ ನಿವಾರಣೆ, ಕೀಲು ಮತ್ತು ಮೂಳೆ, ಕಿವಿ ಮತ್ತು ಗಂಟಲು, ಸಕ್ಕರೆ ಕಾಯಿಲೆ, ಹೃದ್ರೋಗ, ನೇತ್ರ ಚಿಕಿತ್ಸೆ, ನರರೋಗ ಮತ್ತು ಮಾನಸಿಕ, ದಂತ, ಡಯಾಗ್ನಾಸ್ಟಿಕ್, ಮೂತ್ರಪಿಂಡ, ಚರ್ಮರೋಗ, ಕ್ಯಾನ್ಸ್‌ರ್, ಮಕ್ಕಳ ವಿಭಾಗ ಸೇರಿದಂತೆ 18ಕ್ಕೂ ಹೆಚ್ಚು ವಿಭಾಗಗಳ ನೂರಕ್ಕೂ ಹೆಚ್ಚು ತಜ್ಞ ವೈದ್ಯರು  ಈ ಬೃಹತ್ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದರು.

 

ಬೆಸಗರಹಳ್ಳಿ ಹಾಗೂ ಕೊಪ್ಪ ವ್ಯಾಪ್ತಿಯ 30ಕ್ಕೂ ಹೆಚ್ಚು ಹಳ್ಳಿಗಳ 2ಸಾವಿರಕ್ಕೂ ಹೆಚ್ಚು ಜನರು ವಿವಿಧ ವಿಭಾಗಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ತಪಾಸಣೆಗೆ ಒಳಗಾದರು. ರಕ್ತದೊತ್ತಡ, ಇಸಿಜಿ, ರಕ್ತ ಸೇರಿದಂತೆ ಹಲವು ಉಚಿತ ಪರೀಕ್ಷೆಗಳೊಂದಿಗೆ ಆಗಮಿಸಿದ ರೋಗಿಗಳಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಿದ್ದು ಶಿಬಿರದ ವಿಶೇಷವಾಗಿತ್ತು. ನೇತ್ರ ತಪಾಸಣೆ ವಿಭಾಗದಲ್ಲಿ ಕಣ್ಣಿನ ಪೊರೆಯಿಂದ ಬಾಧಿತರಾಗಿದ್ದ 100ಕ್ಕೂ ಹೆಚ್ಚು ನೇತ್ರ ರೋಗಿಗಳನ್ನು ಶಸ್ತ್ರ ಚಿಕಿತ್ಸೆಗೆ ಶಿಫಾರಸ್ಸು ಮಾಡಲಾಯಿತು.ಕುಪ್ಪಂ ಮೆಡಿಕಲ್ ಕಾಲೇಜಿನ ಅಧೀಕ್ಷಕ ಡಾ.ಎಲ್.ಕೃಷ್ಣ ಶಿಬಿರಕ್ಕೆ ಚಾಲನೆ ನೀಡಿದರು. ಶಾಸಕಿ ಕಲ್ಪನಾ ಸಿದ್ದರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಎಸ್.ಎಂ.ಶಂಕರ್, ಗ್ರಾ.ಪಂ. ಅಧ್ಯಕ್ಷೆ ಇಂದ್ರಮ್ಮ ಪುಟ್ಟಸ್ವಾಮಿ ಶಿಬಿರ ಕುರಿತು ಮಾತನಾಡಿದರು.ಕರ್ನಾಟಕ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಎಚ್.ಎನ್.ರವೀಂದ್ರ, ಕಾರ್ಯದರ್ಶಿ ಡಾ.ಶಶಿಧರ್ ಬಸವರಾಜು, ಡಿಎ ಡಾ.ಮರೀಗೌಡ,  ಮಿಮ್ಸ ಅಧೀಕ್ಷಕ ಡಾ.ಎನ್.ರಾಮಲಿಂಗೇಗೌಡ, ಜಿ.ಪಂ. ಸದಸ್ಯೆ ಸವಿತಾ ಮಧುಸೂದನ್, ತಾ.ಪಂ. ಸದಸ್ಯೆ ಸುನಂದಾ ಸುಧಾಕರ್, ವರ್ತಕರ ಸಂಘದ ಅಧ್ಯಕ್ಷ ಸಿ.ನಾರಾಯಣಸ್ವಾಮಿ,  ಔಷಧಿ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕೇಶ್, ನಿವೃತ್ತ ಪ್ರಾಂಶುಪಾಲ ಪ್ರೊ.ಗದ್ದೆಲಿಂಗಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಕೋಣಸಾಲೆ ನರಸರಾಜು, ಭಾರತ ವಿಕಾಸ ಪರಿಷತ್ ಅಧ್ಯಕ್ಷ ವಿ.ಹರ್ಷ, ಕಾರ್ಯಕ್ರಮದ ಆಯೋಜಕರಾದ ಬಿ.ವಿಜಯೇಂದ್ರ ಸೇರಿದಂತೆ ನೂರಾರು ವೈದ್ಯರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಪ್ರಾಂಶುಪಾಲರಾದ ಡಾ.ಲೀಲಾ ಅಪ್ಪಾಜಿ ಅವರು ಸಂಗ್ರಹಿಸಿರುವ `ಗಾಂಧಿಯೆಡೆಗೆ ಒಂದು ಹೆಜ್ಜೆ~ ಅಪೂರ್ವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry