ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋಡಂಗಿತನ...

ಬುಧವಾರ, ಮೇ 22, 2019
24 °C

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೋಡಂಗಿತನ...

Published:
Updated:

ಬೆಂಗಳೂರು: ಒಂದೆಡೆ ಕಾಮಗಾರಿಗಳ ಅನುಷ್ಠಾನಕ್ಕೆ ಹಣದ ಕೊರತೆ ಇದೆ ಎನ್ನುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತೊಂದೆಡೆ ಅತ್ಯಂತ ಕಡಿಮೆ ಬೆಲೆಗೆ ತನಗೆ ಸೇರಿದ ಆಸ್ತಿಗಳನ್ನು ಅತ್ಯಂತ ಕಡಿಮೆ ಬೆಲೆಗೆ, ಹಲವು ವರ್ಷಗಳವರೆಗೆ ಗುತ್ತಿಗೆ ನೀಡಿರುವ ಘಟನೆಗಳು ಬೆಳಕಿಗೆ ಬಂದಿವೆ.ನಗರದ ಪ್ರಮುಖ ಸ್ಥಳಗಳಲ್ಲಿ ತನಗೆ ಸೇರಿದ 200 ಜಾಗಗಳನ್ನು ಪಾಲಿಕೆ ಖಾಸಗಿಯವರಿಗೆ ಅತಿ ಕಡಿಮೆ ಬೆಲೆಗೆ ದೀರ್ಘಾವಧಿಗೆ ಗುತ್ತಿಗೆ ನೀಡಿದೆ. ಖಾಸಗಿ  ಸಂಸ್ಥೆಗಳು ತಾವು ಪಡೆದ ಜಾಗವನ್ನು ಮತ್ತೊಂದು ಸಂಸ್ಥೆಗೆ ನೀಡಿ ಅಪಾರ ಲಾಭ ಮಾಡಿಕೊಳ್ಳುತ್ತಿವೆ!ಬೆಂಗಳೂರಿನಲ್ಲಿ ಒಂದು ಪುಟ್ಟ ಕೊಠಡಿ ಅಥವಾ ಮನೆಯನ್ನು ಬಾಡಿಗೆಗೆ ಪಡೆಯುವುದೂ ದುಬಾರಿಯಾದುದು. ಆದರೆ ನಗರದ ಪ್ರಮುಖ ಭಾಗವಾದ ಕ್ಯಾವಲರಿ ರಸ್ತೆಯಲ್ಲಿ (ಕ್ವೀನ್ಸ್ ರಸ್ತೆಗೆ ಸಂಪರ್ಕಿಸುವ) 3 ಸಾವಿರ ಚದರ ಅಡಿ ಜಾಗವನ್ನು ಮಾಸಿಕ 100 ರೂಪಾಯಿಗಳಂತೆ 99 ವರ್ಷಗಳ ಅವಧಿಗೆ ನೀಡಿದೆ!ಸ್ವಾರಸ್ಯದ ಸಂಗತಿಯೆಂದರೆ, ಇದನ್ನು ಗುತ್ತಿಗೆಗೆ ಪಡೆದ `ಕಾಂಟಿನೆಂಟಲ್ ಎಕ್ಸ್‌ಪೋರ್ಟರ್ಸ್~ (ಎಲ್‌ಇ) ಸಂಸ್ಥೆಯು `ಲೋಟಸ್ ಲ್ಯಾಬ್ಸ್ ಪ್ರೈ.ಲಿ.~ಗೆ (ಎಲ್‌ಎಲ್‌ಪಿಎಲ್) ಮಾಸಿಕ ರೂ 28 ಲಕ್ಷ ರೂಪಾಯಿಗೆ ಉಪ ಗುತ್ತಿಗೆ ನೀಡಿದೆ.ಮಾಹಿತಿ ಹಕ್ಕು ಕಾಯ್ದೆಯಡಿ ನಗರದ `ಫೈವ್ ಈಯರ್ಸ್‌ ಲಾ ಕೋರ್ಸ್ ಅಡ್ವೊಕೇಟ್ಸ್~ (ಎಫ್‌ಐಎಲ್‌ಸಿಎಎ) ಸಂಸ್ಥೆಯ ಅಧ್ಯಕ್ಷ ಎಸ್.ಉಮೇಶ್ ಈ ಮಾಹಿತಿಯನ್ನು ಪಡೆದಿದ್ದು, 1976ರ ಜನವರಿ 8ರಂದು ಮಿಲ್ಲರ್ಸ್‌ ರಸ್ತೆಯ 3 ಸಾವಿರ ಚದರ ಅಡಿ ಪ್ರದೇಶವನ್ನು ಸಿಇ ಸಂಸ್ಥೆಯ ಪಾಲುದಾರ ಎಸ್.ಸಂಪತ್‌ರಾಜ್ ಅವರು 99 ವರ್ಷಗಳ ಅವಧಿಗೆ ಪಡೆದಿದ್ದರು. ಅದನ್ನು ಇದೀಗ ಎಲ್‌ಎಲ್‌ಪಿಎಲ್ ಕಂಪೆನಿಗೆ ಉಪಗುತ್ತಿಗೆ ನೀಡುವ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ.ಗುತ್ತಿಗೆ ನೀಡುವಾಗ ಪಾಲಿಕೆ ವಿಧಿಸಿದ ಷರತ್ತುಗಳನ್ನು ಸಿಇ ಸಂಸ್ಥೆಯು ಇನ್ನೊಂದು ಸಂಸ್ಥೆಗೆ ಉಪ ಗುತ್ತಿಗೆ ನೀಡುವ ಮೂಲಕ ಉಲ್ಲಂಘಿಸಿದೆ. ಅದ್ದರಿಂದ 18 ಆಗಸ್ಟ್ 2010ರಂದು ಬಿಬಿಎಂಪಿಯು ಕರ್ನಾಟಕ ಸಾರ್ವಜನಿಕ ಆಸ್ತಿ ಕಾಯ್ದೆ 1974ರ ಕಲಂ 4 (1)ರಡಿ ನೋಟಿಸ್ ಜಾರಿಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದವರಿಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ಸೂಚಿಸಿಲ್ಲ.`ಪ್ರಜಾವಾಣಿ~ಯು ಈ ಪ್ರದೇಶದ ಸುತ್ತಮುತ್ತ ಕಟ್ಟಡಗಳ ಬಾಡಿಗೆ ದರವನ್ನು ವಿಚಾರಿಸಿದಾಗ ಭಾರಿ ಪ್ರಮಾಣದ ವ್ಯತ್ಯಾಸ ಕಂಡು ಬಂತು. 1,200 ಚದರ ಅಡಿ ವ್ಯಾಪ್ತಿಯಲ್ಲಿ ಕಟ್ಟಲಾದ ಮೂರು ಮಹಡಿಯ ಕಟ್ಟಡವೊಂದನ್ನು ವಿಚಾರಿಸಿದಾಗ, ತಳ ಮಹಡಿಯ ದರ ರೂ 12 ಸಾವಿರ (900 ಚ.ಅಡಿ-ತಲಾ ಒಂದು ಚದರ ಅಡಿಗೆ ರೂ 13), 1,100 ಚದರ ಅಡಿಯಲ್ಲಿ ನಿರ್ಮಿತನೆಲ ಮಹಡಿಯ ಬಾಡಿಗೆ 30 ಸಾವಿರ (ಪ್ರತಿ ಚ.ಅಡಿಗೆ ರೂ 26.60).ಈ ಕುರಿತು ಮಾತನಾಡಿದ ಉಮೇಶ್, `ಸರ್ಕಾರ ನಿಗದಿಪಡಿಸಿದ ದರದಂತೆ ಈ ಜಾಗವನ್ನು ಬಾಡಿಗೆಗೆ ನೀಡಿದ್ದರೂ ಸಹ ಮಾಸಿಕ 9 ಲಕ್ಷ ಆದಾಯ ಬರುತ್ತಿತ್ತು. ಮಾರುಕಟ್ಟೆ ದರಕ್ಕೆ ಅನ್ವಯಿಸಿದರೆ ಈ ಮೊತ್ತ 30 ಲಕ್ಷ ಆಗುತ್ತದೆ~ ಎಂದರು.ಇದೊಂದೇ ಅಲ್ಲ. ಇಂಥ 15ಕ್ಕೂ ಅಧಿಕ ಬೆಲೆಬಾಳುವ ಜಾಗವನ್ನು ಪಾಲಿಕೆ ಹೀಗೆ ಗುತ್ತಿಗೆ ನೀಡಿದ್ದನ್ನು ಗುರುತಿಸಿದೆ. ಆದರೆ ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಬಿಬಿಎಂಪಿ ಮೂಲಗಳೇ ಬಹಿರಂಗಪಡಿಸಿವೆ. ಈ ಬಗ್ಗೆ ಪಾಲಿಕೆಯ ಎಸ್ಟೇಟ್ ವಿಭಾಗದ ಉಪ ಆಯುಕ್ತರನ್ನು ಸಂಪರ್ಕಿಸಿದಾಗ, `ಇಂಥ ಪ್ರಕರಣಗಳು 1970-80ರ ದಶಕದಲ್ಲಿ ನಡೆದಿವೆ.ಈ ಬಗ್ಗೆ ಕಾನೂನು ತಜ್ಞರನ್ನು ಸಂಪರ್ಕಿಸಿದ್ದೇವೆ. ಆದರೆ ಗುತ್ತಿಗೆ ಅವಧಿ ಮುಗಿಯುವವರೆಗೂ ಏನೂ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಆದರೆ ಅವಧಿ ಮುಗಿದ ಪ್ರದೇಶಗಳನ್ನು ನಾವು ವಶಕ್ಕೆ ಪಡೆಯುತ್ತೇವೆ. ಅವಧಿ ಮುಗಿದ 208 ಆಸ್ತಿಗಳಿವೆ. ಅದರಲ್ಲಿ 100 ಆಸ್ತಿಗಳನ್ನು ವರ್ಷದೊಳಗೆ ನಮ್ಮ ಸ್ವಾಧೀನಕ್ಕೆ ಪಡೆಯುತ್ತೇವೆ~ ಎಂದರು.ಸಿಇ ಸಂಸ್ಥೆ ಷರತ್ತು ಉಲ್ಲಂಘಿಸಿದ ಬಗ್ಗೆ ಕೇಳಲಾದ ಪ್ರಶ್ನೆಗೆ, `ಇದೇ 28ರಂದು ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ~ ಎಂದು ಹೇಳಿದರು.ಎಫ್‌ಐಎಲ್‌ಸಿಎಎ ನಗರದ 15 ಇಂಥ ಆಸ್ತಿಗಳ ಬಗ್ಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಮಾಹಿತಿ ಬಯಸಿದೆ.

 

ಸುಮಾರು 50ಕ್ಕೂ ಅಧಿಕ ಷರತ್ತು ಉಲ್ಲಂಘನೆಗಳು ನಡೆದಿವೆ ಎಂದು ಶಂಕಿಸಿದೆ. ಅದರಲ್ಲಿ ವಿಕ್ಟೋರಿಯಾ ರಸ್ತೆ, ಎಂ.ಜಿ.ರಸ್ತೆಯಲ್ಲಿನ ಆಸ್ತಿಗಳೂ ಸೇರಿವೆ. ಇವುಗಳನ್ನು 1990ರ ದಶಕದಲ್ಲಿ ಈ ಗುತ್ತಿಗೆಗಳನ್ನು ನೀಡಲಾಗಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry