ಬೃಹತ್ ಮೊತ್ತದತ್ತ ದಕ್ಷಿಣ ಆಫ್ರಿಕಾ

7

ಬೃಹತ್ ಮೊತ್ತದತ್ತ ದಕ್ಷಿಣ ಆಫ್ರಿಕಾ

Published:
Updated:
ಬೃಹತ್ ಮೊತ್ತದತ್ತ ದಕ್ಷಿಣ ಆಫ್ರಿಕಾ

ಪರ್ತ್ (ಎಎಫ್‌ಪಿ): ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.

ವಾಕಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ದಿನವಾದ ಶುಕ್ರವಾರದ ಅಂತ್ಯಕ್ಕೆ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 11 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 33 ರನ್ ಕಲೆ ಹಾಕಿತ್ತು. ಆದರೆ, ಶನಿವಾರ ಆತಿಥೇಯ ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಡ್ವೇಲ್ ಸ್ಟೈನ್ (40ಕ್ಕೆ4) ಹಾಗೂ ರಾಬಿನ್ ಪೀಟರ್ಸನ್ (44ಕ್ಕೆ3) ಅವರ ಕರಾರುವಾಕ್ಕಾದ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡದವರು ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದರು. ಆಸೀಸ್ 53.1 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 163 ರನ್ ಮಾತ್ರ ಕಲೆ ಹಾಕಿತು. ಇದರಿಂದ ಪ್ರವಾಸಿ ತಂಡ 62 ರನ್‌ಗಳ ಮುನ್ನಡೆ ಗಳಿಸಿತು.

ಆಸೀಸ್ ತಂಡದ ಮ್ಯಾಥ್ಯೂ ವೇಡ್ (68, 102ಎಸೆತ, 7ಬೌಂಡರಿ, 3 ಸಿಕ್ಸರ್) ಅವರನ್ನು ಹೊರತು ಪಡಿಸಿದರೆ, ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಆಫ್ರಿಕಾದ ಬೌಲಿಂಗ್ ಎದುರಿಸಿ ನಿಲ್ಲುವಲ್ಲಿ ವಿಫಲರಾದರು. ಎರಡನೇ ಇನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿರುವ ದಕ್ಷಿಣ ಆಫ್ರಿಕಾ ಎರಡನೇ ದಿನದಾಟದ ಅಂತ್ಯಕ್ಕೆ 38 ಓವರ್‌ಗಳ್ಲಲಿ 2 ವಿಕೆಟ್ ಕಳೆದುಕೊಂಡು 230 ರನ್ ಗಳಿಸಿದೆ.

ದಕ್ಷಿಣ ಆಫ್ರಿಕಾ ಆರಂಭದಲ್ಲಿ ಆಘಾತ ಅನುಭವಿಸಿತು. ಆದರೂ, ನಾಯಕ ಗ್ರೇಮ್ ಸ್ಮಿತ್ (84, 100ಎಸೆತ, 4ಬೌಂಡರಿ) ಹಾಗೂ ಹಾಶಿಮ್ ಆಮ್ಲಾ (ಬ್ಯಾಟಿಂಗ್ 99, 84ಎಸೆತ, 10 ಬೌಂಡರಿ) ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 74 ಓವರ್‌ಗಳಲ್ಲಿ 225 ಹಾಗೂ ದ್ವಿತೀಯ ಇನಿಂಗ್ಸ್ 38 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 230. (ಅಲ್ವಿರೊ ಪೀಟರ್ಸನ್ 23, ಗ್ರೇಮ್ ಸ್ಮಿತ್ 84, ಹಾಶಿಮ್ ಆಮ್ಲಾ ಬ್ಯಾಟಿಂಗ್ 99, ಜಾಕ್ ಕಾಲಿಸ್ ಬ್ಯಾಟಿಂಗ್ 17; ಮಿಷೆಲ್ ಸ್ಟಾರ್ಕ್  76ಕ್ಕೆ1, ಮಿಷೆಲ್ ಜಾನ್ಸನ್ 35ಕ್ಕೆ1). ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ 53.1 ಓವರ್‌ಗಳಲ್ಲಿ 163. (ಡೇವಿಡ್ ವಾರ್ನರ್ 13, ರಿಕಿ ಪಾಂಟಿಂಗ್ 4, ಮೈಕಲ್ ಕ್ಲಾರ್ಕ್ 5, ಮೈಕ್ ಹಸ್ಸಿ 12, ಮ್ಯಾಥ್ಯೂ ವೇಡ್ 68, ಜಾನ್ ಹಸ್ಟಿಂಗ್ಸ್ 32; ಡ್ವೇಲ್ ಸ್ಟೈನ್ 40ಕ್ಕೆ4, ಫಿಲಾಂಡರ್ 55ಕ್ಕೆ2, ಮಾರ್ನೆ ಮಾರ್ಕೆಲ್ 19ಕ್ಕೆ1, ರಾಬಿನ್ ಪೀಟರ್ಸನ್ 44ಕ್ಕೆ3).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry