ಬೃಹತ್ ವಾಣಿಜ್ಯ ಕಟ್ಟಡಗಳಿಂದ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ:ರೂ 35 ಕೋಟಿ ವಸೂಲಿಗೆ ಕ್ರಮ

7

ಬೃಹತ್ ವಾಣಿಜ್ಯ ಕಟ್ಟಡಗಳಿಂದ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ:ರೂ 35 ಕೋಟಿ ವಸೂಲಿಗೆ ಕ್ರಮ

Published:
Updated:

ಬೆಂಗಳೂರು: ಮಹದೇವಪುರ ವಲಯ ವ್ಯಾಪ್ತಿಗೆ ಒಳಪಡುವ ಟೆಕ್ ಪಾರ್ಕ್ ಸೇರಿದಂತೆ 10 ಬೃಹತ್ ವಾಣಿಜ್ಯ ಕಟ್ಟಡಗಳ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದಿರುವ ಹಿನ್ನೆಲೆಯಲ್ಲಿ 2008-09ರಿಂದ 2011-12ನೇ ಸಾಲಿನವರೆಗೆ ವ್ಯತ್ಯಾಸದ ಮೊತ್ತ 34.90 ಕೋಟಿಯನ್ನು ದಂಡ ಸಮೇತ ವಸೂಲಿ ಮಾಡಲು ಬಿಬಿಎಂಪಿ ನಿರ್ಧರಿಸಿದೆ.ಈ ಸಂಬಂಧ 10 ಬೃಹತ್ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಈ ಕಟ್ಟಡಗಳು ವಾರ್ಷಿಕ 14.14 ಕೋಟಿ ತೆರಿಗೆ ವಂಚಿಸಿವೆ ಎಂದು ಆರೋಪಿಸಲಾಗಿದೆ.ಮೆ. ಸಮೀಕ್ಷಾ ಸರ್ವೀಸ್ ಮತ್ತು ಐಕಾನ್ ಕ್ಯಾಡ್ ಸಾಫ್ಟ್ ಅಂಡ್ ಸರ್ವೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಟ್ಟಡಗಳ ಜಾಗ ಅಳತೆ ಮಾಡಿ ನೀಡಿದ ವರದಿಯನ್ನು ಆಧರಿಸಿ ಪಾಲಿಕೆಯು ತೆರಿಗೆ ಪಾವತಿಸಿರುವುದಕ್ಕೂ ಹಾಗೂ ಕಟ್ಟಡ ಹೊಂದಿರುವ ಜಾಗಕ್ಕೂ ತಾಳೆ ಹಾಕಿ ನೋಡಿದಾಗ ತೆರಿಗೆ ಪಾವತಿಯಲ್ಲಿ ವ್ಯತ್ಯಾಸವಾಗಿರುವುದು ಕಂಡು ಬಂದಿದೆ ಎಂದು ಮಹದೇವಪುರ ವಲಯದ ಜಂಟಿ ಆಯುಕ್ತ ಕೆ.ಎನ್. ದೇವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಆರ್‌ಎಂಜೆಡ್ ಎಕೋ ಸ್ಪೇಸ್, ಸಾಲಾರ್ ಪುರಿಯಾ ಟಚ್ ಸ್ಟೋನ್, ಬೃಂದಾವನ್ ಟೆಕ್ ವಿಲೇಜ್, ಶ್ರೀ ರಿಲೇಟರ್ಸ್‌, ಐಸ್‌ಲ್ಯಾಂಡ್ ಸ್ಟಾರ್ ಮಾಲ್ ಡೆವಲಪರ್ಸ್‌, ಸಾಲಾರ್ ಪುರಿಯಾ ಹಾಲ್ ಮಾರ್ಕ್, ಸೆಸ್ನಾ ಗಾರ್ಡನ್ ಬ್ಯುಸಿನೆಸ್ ಪಾರ್ಕ್, ಫೆರ್ನ್ಸ್ ಐಕಾನ್, ಬಿಗ್ ಬಜಾರ್ ಹಾಗೂ ಪ್ರೆಸ್ಟೀಜ್ ಗಾರ್ಡನ್ ಕನ್ಸ್‌ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಕಟ್ಟಡಗಳ ತೆರಿಗೆ ಪಾವತಿಯಲ್ಲಿ ವ್ಯತ್ಯಾಸ ಕಂಡು ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry