ಶನಿವಾರ, ಏಪ್ರಿಲ್ 17, 2021
22 °C

ಬೆಂಕಿಯ ಬಲೆಯೊಳಗೆ ಮುದುಮಲೆ ಬೆಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ತಾಲ್ಲೂಕಿನ ಮುದುಮಲೆ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಗ್ನಿ ಅನಾಹುತ ಉಂಟಾಗಿದ್ದು, ಅಪಾರ ಸಸ್ಯ ಸಂಪತ್ತು ನಾಶವಾಗಿದೆ. ಕಳೆದ ಒಂದು ವಾರದಿಂದ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆಗೆ ಬೆಟ್ಟದ ಅಪೂರ್ವ ಸಸ್ಯ ಸಂಕುಲ, ಪ್ರಾಣಿಪಕ್ಷಿ ಕೀಟಗಳು ಬೆಂಕಿಗೆ ಆಹುತಿಯಾಗಿವೆ. ಕೊಳ್ಳೇಗಾಲ ಪಟ್ಟಣದ ಬಸ್ತೀಪುರ ಸಮೀಪದ ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಹೊಂದಿಕೊಂಡಂತೆ ಇರುವ ಈ ಮುದುಮಲೆ ಗುಡ್ಡದಲ್ಲಿ ಅರಣ್ಯ ಇಲಾಖೆ ಕಾಡು ಬೆಳೆಸುವ ಕಾರ್ಯಕ್ರಮ ಹಮ್ಮಿಕೊಂಡು ಇಲ್ಲಿ  ಸಸಿ ನೆಡುವ ಮೂಲಕ  ಸಮೃದ್ಧ ಕಾಡು ಬೆಳೆಸಿತ್ತು. ಈಗ ಬೆಂಕಿಯಲ್ಲಿ ಕಾಡುಹಂದಿ, ತೋಳ, ನರಿ, ಮೊಲ, ಕಾಡುಬೆಕ್ಕು ಮುಂತಾದ ಪ್ರಾಣಿ ಪಕ್ಷಿ ಸಂಕುಲ ಬೆಂದು ಹೋಗಿವೆ.ಮುದುಮಲೆಗುಡ್ಡದಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆ ಪಕ್ಕದ ಮುನೇಶ್ವರಗುಡ್ಡಕ್ಕೂ ಹರಡುತ್ತಿದ್ದು, ಹಾಗೆಯೇ ಇನ್ನಿತರ ಬೆಟ್ಟಗಳಿಗೂ ಹರಡಿಕೊಳ್ಳುತ್ತಿದೆ. ಇದರಿಂದ ಅರಣ್ಯ ಅಧಿಕಾರಿಗಳು ಬೆಂಕಿಯ ಕೆನ್ನಾಲಿಗೆಗೆ ಇತರ ಗುಡ್ಡಗಳು ಬಲಿಯಾಗದಂತೆ ತಡೆಯಬೇಕಿದೆ. ಪ್ರ ತಿವರ್ಷವೂ ಈ ಗುಡ್ಡಕ್ಕೆ ಬೆಂಕಿ ಬೀಳುವುದು ಸಾಮಾನ್ಯವಾಗಿದೆ. ಈ ಬೆಂಕಿಯಿಂದ ಅರಣ್ಯ ರಕ್ಷಿಸಲು ಅರಣ್ಯ ಇಲಾಖೆ ಕೈಗೊಂಡ ಮುನ್ನೆಚರಿಕೆ ಕ್ರಮಗಳು ಸಫಲವಾಗಿಲ್ಲ. ಬೇಸಿಗೆ ಪ್ರಾರಂಭ ಗೊಳ್ಳುವ ಮುನ್ನ ಈ ಗುಡ್ಡದಲ್ಲಿ ಬೆಳೆದು ಒಣಗುವ ಹುಲ್ಲು ಹಾಗೂ ತರಗೆಲೆಗಳಿಗೆ ಬೆಂಕಿ ಬೀಳದಂತೆ ಕ್ರಮ ಕೈಗೊಂಡಾಗ ಮಾತ್ರ ಬೆಂಕಿ ನಿಯಂತ್ರಣ ಸಾಧ್ಯ.ಕಾಡಿಗೆ ತೆರಳುವ ದನಗಾಹಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಕೆಲವೊಮ್ಮೆ ಕಿಡಿಗೇಡಿಗಳು ಬೇಕೆಂದೇ ಕಾಡಿನಲ್ಲಿ ಬೀಡಿ ಸೇದಿ ಎಸೆಯುತ್ತಾರೆ. ಕೆಲವರು ಇದ್ದಲು ಸಂಗ್ರಹಕ್ಕೆ ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಅರಣ್ಯ ಇಲಾಖೆ ಹೆಚ್ಚಿನ ಗಸ್ತು ಕ್ರಮ ಕೈಗೊಳ್ಳಬೇಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.