ಮಂಗಳವಾರ, ನವೆಂಬರ್ 12, 2019
28 °C

ಬೆಂಕಿ: ಅಡಕೆ, ತೆಂಗು ಗಿಡಗಳಿಗೆ ಹಾನಿ

Published:
Updated:

ಜಾವಗಲ್: ಇಲ್ಲಿನ ದೊಡ್ಡಕೆರೆಯ ಅಂಗಳದಲ್ಲಿ ಬೆಳೆದಿರುವ ಜಾಲಿಗಿಡಗಳ ಪೊದೆಗಳಿಗೆ ಸೋಮವಾರ ಸಂಜೆ ಆಕಸ್ಮಿಕವಾಗಿ ತಗುಲಿದ ಬೆಂಕಿ ಕೆರೆಯ ಪಕ್ಕದಲ್ಲಿರುವ ತೋಟಕ್ಕೂ ವ್ಯಾಪಿಸಿ ಹುಣಸೆ ಮರ, ಅಡಿಕೆ ಸಸಿಗಳು ನಾಶವಾಗಿವೆ.ತೋಟದವರು ಕೂಡಲೇ ಅಗ್ನಿ ಅನಾಹುತ ಸ್ಥಳಕ್ಕೆ ಧಾವಿಸಿ ತೋಟದಲ್ಲಿನ ಕೊಳವೆ ಬಾವಿಗಳಿಂದ ನೀರನ್ನು ತಂದು ಸುರಿದರು, ಅಗ್ನಿಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು.

ಪ್ರತಿಕ್ರಿಯಿಸಿ (+)