ಬುಧವಾರ, ಏಪ್ರಿಲ್ 14, 2021
32 °C

ಬೆಂಕಿ ಅನಾಹುತ: ಎಲ್ಲೆಲ್ಲೂ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಏಕಾಏಕಿ ಹತ್ತಿದ ಬೆಂಕಿ, ಎಲ್ಲೆಡೆ ಆತಂಕ, ಸಾಹಸ ಮೆರೆದ ಅಗ್ನಿಶಾಮದ ದಳ ಸಿಬ್ಬಂದಿ, ತಪ್ಪಿದ ಭಾರಿ ಅನಾಹುತ...

ಇದೆಲ್ಲ ನಡೆದದ್ದು ನಗರದ ಕರ್ನಾಟಕ ಫಾರ್ಮಸಿ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಅಣಕು ಪ್ರದರ್ಶನದಲ್ಲಿ.ಏರ್‌ಫೋರ್ಸ್ ಫೈರ್, ಅಗ್ನಿಶಾಮಕ ದಳ ಹಾಗೂ 108 ಸಹಯೋಗದೊಂದಿಗೆ ಬೆಂಕಿ ಅನಾಹುತದ ಬಗ್ಗೆ ಜನಜಾಗೃತಿ ಮೂಡಿಸಲು ಆಯೋಜಿಸಿದ್ದ ಪ್ರಾತ್ಯಕ್ಷಿಕೆ ಕೆಲ ಕಾಲ ಸುತ್ತಮುತ್ತಲಿನ ಜನರನ್ನು ದಿಗಿಲುಗೊಳಿಸಿತ್ತು. ನಂತರ ‘ಅಣಕು ಪ್ರದರ್ಶನ’ ಎಂದು ಗೊತ್ತಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.ಬೆಂಕಿ ಅನಾಹುತ ಸಂಭವಿಸುವ ಸಂದರ್ಭಗಳಲ್ಲಿ ಯಾವ ರೀತಿಯ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಸಿಕ್ಕಿಬಿದ್ದವರ ರಕ್ಷಣೆ ಹಾಗೂ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸಲು ಅನುಸರಿಬೇಕಾದ ಕ್ರಮಗಳೇನು ಎಂಬ ಬಗ್ಗೆ ನೆರೆದವರಿಗೆ ಮಾಹಿತಿ ನೀಡಲಾಯಿತು.ಬೆಂಕಿ ಅನಾಹುತದ ಸಂದರ್ಭದಲ್ಲಿ ಕಟ್ಟಡಗಳಲ್ಲಿ ಸಿಕ್ಕಿ ಹಾಕಿಕೊಂಡವರನ್ನು ರಕ್ಷಿಸುವ ಬಗೆಯನ್ನೂ ತಿಳಿಸಿಕೊಡಲಾಯಿತು.

1944ರ ಏಪ್ರಿಲ್ 14 ರಂದು ನಡೆದ ವಿಕ್ಟೋರಿಯಾ ಡಕ್ ಮುಂಬೈ ಕಾರ್ಗೊ ವಿಸೆಲ್ ಕ್ಯಾರಿಯರ್ ಬೆಂಕಿ ಅನಾಹುತದಲ್ಲಿ 100 ಕೋಟಿ ರೂಪಾಯಿಗಳ ಆಸ್ತಿ ಹಾನಿ ಆಗಿತ್ತು. 336 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಂತರ ಗಂಭೀರವಾಗಿ ಗಾಯಗೊಂಡಿದ್ದ 1,074 ಜನ ಮೃತಪಟ್ಟಿದ್ದರು.ದುರಂತದ ನೆನಪಿನಲ್ಲಿ ಜಿಲ್ಲೆಯಲ್ಲಿ ಏಪ್ರಿಲ್ 14 ರಿಂದ 20 ರವರೆಗ ಬೆಂಕಿ ನಂದಿಸುವ ಹಾಗೂ ಜೀವ ಉಳಿಸುವ ಕುರಿತು ಪ್ರಾತ್ಯಕ್ಷಿಕೆ ಆಯೋಜಿಸಲಾಗಿದೆ ಎಂದು ಪ್ರಮುಖರು ತಿಳಿಸಿದರು.ಏರ್‌ಫೋರ್ಸ್‌ನ ಜೆ.ಡಬ್ಲ್ಯೂ.ಓ. ಎ.ಕೆ. ತಿವಾರಿ, 108 ಅಂಬ್ಯಲೆನ್ಸ್‌ನ ಸಂಜುಕುಮಾರ, ಶಿವಶರಣಪ್ಪ, ಜಾರ್ಜ್, ಗೋವಿಂದ, ನಂದಕಿಶೋರ, ಬಾಬುರಾವ ಕೊಳಾರ ಮತ್ತಿತರರು ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.