ಬೆಂಕಿ ಆಕಸ್ಮಿಕ: ಬೆಳೆ ಭಸ್ಮ

7

ಬೆಂಕಿ ಆಕಸ್ಮಿಕ: ಬೆಳೆ ಭಸ್ಮ

Published:
Updated:

ಹಿರೇಕೆರೂರ: ತಾಲ್ಲೂಕಿನ ಕುಡುಪಲಿ ಗ್ರಾಮದಲ್ಲಿ ಈಚೆಗೆ ಬೆಂಕಿ ಆಕಸ್ಮಿಕದಿಂದ ಕೊಯ್ಲಿಗೆ ಬಂದಿದ್ದ ಸುಮಾರು 15 ಎಕರೆ ಗೋವಿನಜೋಳದ ಹೊಲ ಸುಟ್ಟುಹೋಗಿ ಅಪಾರ ಹಾನಿ ಸಂಭವಿಸಿದೆ.ಬೆಂಕಿಯನ್ನು ನಂದಿಸಲು ಹಿರೇಕೆರೂರ ಅಗ್ನಿಶಾಮಕ ದಳದವರು ಆಗಮಿಸಿದರೂ ಹೊಲಗಳಿಗೆ ಹೋಗುವುದಕ್ಕೆ ದಾರಿ ಇಲ್ಲದೇ ಅಸಹಾಯಕರಾದರು ಅಷ್ಟರಲ್ಲಿ ಸಂಪೂರ್ಣ ಬೆಳೆ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದ್ದು, ರೈತರಾದ ರಾಮನಗೌಡ ಹೊಸಗೌಡ್ರ, ರಾಮಪ್ಪ ಮಾಳಗೇರ ಹಾಗೂ ಮಹೇಶಪ್ಪ ರುದ್ರಪ್ಪನವರ ಎಂಬವರಿಗೆ ಸೇರಿದ ಗೋವಿನ ಜೋಳದ ಬೆಳೆ ಬೆಂಕಿಗೆ ಆಹುತಿಯಾಗಿದೆ.ಆಕಸ್ಮಿಕ ಬೆಂಕಿಗೆ ಆಹುತಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು  ಬಸನಗೌಡ ಕರೇಗೌಡ್ರ ಹಾಗೂ ಮರಡೆಪ್ಪ ಚೌಡಕ್ಕನವರ ಒತ್ತಾಯಿ ಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry