ಮಂಗಳವಾರ, ಮೇ 11, 2021
26 °C

ಬೆಂಕಿ ಆಕಸ್ಮಿಕ: ಮೂರು ಕಾರ್ಖಾನೆ ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: ಹೊಸೂರಿನ ಸಿಪ್‌ಕಾಟ್ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಸಂಭವಿಸಿದ ಅಗ್ನಿ ಆಕಸ್ಮಿಕದಿಂದ ಮೂರಕ್ಕೂ ಹೆಚ್ಚು ಕಾರ್ಖಾನೆಗಳು ಸುಟ್ಟು ಕರಕಲಾಗಿವೆ.ಸಿಪ್‌ಕಾಟ್ ಕೈಗಾರಿಕಾ ಪ್ರದೇಶದ ಸುಪ್ರೀಮರ್ ಮಾರ್ಕೆಟಿಂಗ್ ಕಂಪೆನಿಯ ದಾಸ್ತಾನು ಮಳಿಗೆಗೆ ಸಂಜೆ ಬೆಂಕಿ ತಗಲಿತು. ಇದರಿಂದ ಒಳಗೆ ಸಂಗ್ರಹಿಸಿಡಲಾಗಿದ್ದ ಪ್ಲಾಸ್ಟಿಕ್ ಕುರ್ಚಿಗಳು, ಹಾಸಿಗೆ, ರಬ್ಬರ್ ಸ್ಪಂಜುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿಯ ಕೆನ್ನಾಲಗೆ ಅಕ್ಕಪಕ್ಕದಲ್ಲಿದ್ದ ಲಕ್ಷ್ಮೀ ಫೀಡ್ಸ್ ಮತ್ತು ಗ್ಲೋಬಲ್ ಕ್ಯಾಲ್ಸಿಯಂ ರಾಸಾಯನಿಕ ಕಾರ್ಖಾನೆಗೂ ವ್ಯಾಪಿಸಿದ್ದರಿಂದ ಕಾರ್ಖಾನೆ ಭಾಗಶಃ ಸುಟ್ಟು ಕರಕಲಾಗಿದೆ. ದುರ್ಘಟನೆಯಿಂದ ಕೋಟ್ಯಂತರ ರೂಪಾಯಿಗಳ ನಷ್ಟ ಸಂಭವಿಸಿರಬಹುದೆಂದು ಅಂದಾಜು ಮಾಡಲಾಗಿದೆ.ಅಗ್ನಿ ಆಕಸ್ಮಿಕಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಹೊಸೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.