ಬೆಂಕಿ: ಎತ್ತುಗಳು ಬಲಿ

7

ಬೆಂಕಿ: ಎತ್ತುಗಳು ಬಲಿ

Published:
Updated:

ಧಾರವಾಡ: ಚಪ್ಪರಕ್ಕೆ ಬೆಂಕಿ ತಗುಲಿ ಎರಡು ಎತ್ತುಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲ್ಲೂಕಿನ ನಿಗದಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.ನಿಗದಿ ಗ್ರಾಮದ ಇಮಾಮಸಾಬ್ ಗಾಂಜಿ ಎಂಬುವವರಿಗೆ ಸೇರಿದ ಎತ್ತುಗಳು ಮೃತಪಟ್ಟಿವೆ. ಇಮಾಮ್‌ಸಾಬ್ ಅವರು ಹೊಲದಲ್ಲಿ ಚಪ್ಪರವನ್ನು ನಿರ್ಮಾಣ ಮಾಡಿ ಅಲ್ಲಿಯೇ ಎತ್ತುಗಳನ್ನು ಕಟ್ಟಿ ಬರುತ್ತಿದ್ದರು. ಗುರುವಾರ ಎಂದಿನಂತೆ ಎತ್ತುಗಳನ್ನು ಕಟ್ಟಿ ವಿದ್ಯುತ್ ಇಲ್ಲದ್ದರಿಂದ ಚುಮಣಿಯನ್ನು ಹಚ್ಚಿ ಅಲ್ಲಯೇ ಇಟ್ಟು ಬಂದಿದ್ದರು.ಆಕಸ್ಮಿಕವಾಗಿ ಚುಮುಣಿ ಉರುಳಿ ಬಿದ್ದು, ಇಡೀ ಚಪ್ಪರಕ್ಕೆ ಬೆಂಕಿ ತಗುಲಿದೆ. ಇದರಿಂದಾಗಿ ಚಪ್ಪರದಲ್ಲಿಯೇ ಇದ್ದ ಎತ್ತುಗಳು ಹೊರಗಡೆ ಬರಲಾಗದೇ ಬೆಂಕಿಯ ಜಳಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿವೆ ಅಲ್ಲದೇ ಚಪ್ಪರದಲ್ಲಿದ್ದ  ಕೃಷಿ ಉಪಕರಣಗಳು ಸುಟ್ಟು ಹೋಗಿವೆ. ಮನೆಯಿಂದ ಹೊಲ ಸುಮಾರು 1 ಕಿ.ಮೀ. ದೂರವಿರುವುದರಿಂದ ಬೆಂಕಿ ಹತ್ತಿದ ವಿಷಯ ಯಾರಿಗೂ ಗೊತ್ತಾಗಿಲ್ಲ. ಬೆಳಗಿನಜಾವ ಬೆಂಕಿ ಹತ್ತಿದ್ದು ಗೊತ್ತಾಗಿದೆ.ಘಟನೆಯಿಂದಾಗಿ ಎತ್ತುಗಳು ಹಾಗೂ ಕೃಷಿ ಉಪಕರಣಗಳು ಸೇರಿ ಒಟ್ಟು ಒಂದು ಲಕ್ಷ ರೂಪಾಯಿ ಈ ಘಟನೆಯಲ್ಲಿ ಹಾನಿಯಾಗಿದೆ ಎಂದು ರೈತ ಸಂಘದ ಮುಖಂಡ ಶಿವನಗೌಡ ಪಾಟೀಲ `ಪ್ರಜಾವಾಣಿಗೆ~ ತಿಳಿಸಿದ್ದಾರೆ. ಇದಕ್ಕೆ ಪರಿಹಾರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry