ಸೋಮವಾರ, ಜೂನ್ 21, 2021
29 °C

ಬೆಂಕಿ ಹಚ್ಚಿ ಮಹಿಳೆ ಕೊಲೆ: ಆರೋಪಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲೆಕ್ಟ್ರಾನಿಕ್‌ಸಿಟಿ ಬಳಿಯ ಬೆಟ್ಟ­ದಾಸನ­ಪುರದಲ್ಲಿ ಸೋಮು ಎಂಬಾತ ಸವಿತಾ (22) ಎಂಬುವರನ್ನು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ.ಮೊದಲ ಪತಿಯಿಂದ ದೂರವಾ ಗಿದ್ದ ಸವಿತಾ ಅವರು ಸೋಮು ಜತೆ ಅನೈತಿಕ ಸಂಬಂಧ ಇಟ್ಟು­ಕೊಂಡಿ­­ದ್ದರು. ಸವಿತಾ ಅವರ ಪತಿ ಮಕ್ಕಳೊಂದಿಗೆ ಪರಪ್ಪನ ಅಗ್ರಹಾರ ಬಳಿ ರಾಯಸಂದ್ರದಲ್ಲಿ ಪ್ರತ್ಯೇಕ­ವಾಗಿ ವಾಸವಾಗಿದ್ದಾರೆ .ಎರಡು ವರ್ಷಗಳಿಂದ ಒಟ್ಟಿಗೆ ವಾಸವಾಗಿದ್ದ ಸವಿತಾ ಮತ್ತು ಸೋಮು ನಡುವೆ ಭಾನುವಾರ ಸಂಜೆ ಜಗಳವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಆತ ಅವರ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.ಗುಂಡಿಗೆ ಬಿದ್ದು ವ್ಯಕ್ತಿ ಸಾವು: ಗಂಗಮ್ಮನಗುಡಿ ಬಳಿ ಲಕ್ಷ್ಮಿಪುರದ ತೋಟವೊಂದ­ರಲ್ಲಿ ಮಂಜುನಾಥ್‌ (50)  ಪಾನಮತ್ತರಾಗಿ ಪಾಳು ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.