ಬೆಂಕಿ ಹೊತ್ತಿಕೊಂಡು ಪತ್ನಿ ಸಾವು, ಪತಿಗೆ ಗಾಯ

7

ಬೆಂಕಿ ಹೊತ್ತಿಕೊಂಡು ಪತ್ನಿ ಸಾವು, ಪತಿಗೆ ಗಾಯ

Published:
Updated:

ಬೆಂಗಳೂರು: ಬೈಯಪ್ಪನಹಳ್ಳಿ ಸಮೀ­ಪದ ಗಜೇಂದ್ರನಗರದಲ್ಲಿ ಗುರುವಾರ ಸ್ಟೌನಲ್ಲಿ ನೀರು ಕಾಯಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸರಳ (23) ಎಂಬುವರು ಸಾವನ್ನಪ್ಪಿದ್ದಾರೆ. ರಕ್ಷಣೆಗೆ ಧಾವಿಸಿದ ಮೃತರ ಪತಿ ಸರವಣ್‌ ಕೂಡ ಗಂಭೀರ ಗಾಯ­ಗೊಂಡು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ದಂಪತಿಗೆ ಮೂರು ವರ್ಷದ ಧನುಷ್‌ ಎಂಬ ಗಂಡು ಮಗು ಹಾಗೂ ಎಂಟು ತಿಂಗಳ ಹೆಣ್ಣು ಮಗು­ವಿದೆ. ಸರಳ ಅವರು ಬೆಳಿಗ್ಗೆ ಸ್ಟೌನಲ್ಲಿ ನೀರು ಕಾಯಿ­ಸಲು ಮುಂದಾ­ದಾಗ ಸ್ಟೌ ಕೆಳಗುರುಳಿದೆ.ಆಗ ಸೀಮೆಎಣ್ಣೆ ಚೆಲ್ಲಿ­ದ್ದ­ರಿಂದ ಬೆಂಕಿ ಇಡೀ ಮನೆಯನ್ನೇ ಆವರಿಸಿದ್ದು, ಸರಳ ಅವರ ಸೀರೆಗೂ ಹೊತ್ತಿ­ಕೊಂಡಿದೆ. ಪತ್ನಿಯ ಚೀರಾಟ ಕೇಳಿದ ಸರವಣ್, ಕೂಡಲೇ ಗೋಣಿ ಚೀಲದೊಂದಿಗೆ ಪತ್ನಿಯ ರಕ್ಷಣೆಗೆ ಧಾವಿಸಿದಾಗ ಅವರಿಗೂ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry