ಬುಧವಾರ, ಏಪ್ರಿಲ್ 14, 2021
24 °C

ಬೆಂಗಳೂರಿಗೆ ಕೆ.ಎಸ್. ಸುದರ್ಶನ ಪಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವಾಯು ವಿಹಾರಕ್ಕೆ ತೆರಳಿದ್ದಾಗ ನಾಪತ್ತೆಯಾಗಿ ಸುದ್ದಿಯಾಗಿದ್ದ ಆರ್‌ಎಸ್‌ಎಸ್‌ನ ಮಾಜಿ ಸರ ಸಂಚಾಲಕ ಕೆ.ಎಸ್.ಸುದರ್ಶನ ನಗರದಿಂದ ಬೆಂಗಳೂರಿಗೆ ಶನಿವಾರ ರೈಲಿನಲ್ಲಿ ತೆರಳಿದರು.ಬಿಗಿ ಪೊಲೀಸ್ ಭದ್ರತೆಯ ನಡುವೆ ನಗರದ ರೈಲ್ವೆ ನಿಲ್ದಾಣಕ್ಕೆ ಮಧ್ಯಾಹ್ನ ಕರೆ ತರಲಾಯಿತು. 3.45 ಕ್ಕೆ ಮೈಸೂರು- ಬೆಂಗಳೂರು- ಮೈಲಾಡತುರೈ ರೈಲಿನಲ್ಲಿ ಅವರು ಪ್ರಯಾಣ ಬೆಳೆಸಿದರು. ಸಹೋದರ

ಎಸ್.ಕೆ.ರಮೇಶ್ ಮತ್ತು ಕುಟುಂಬದವರು ಈ ಸಂದರ್ಭದಲ್ಲಿ ಇದ್ದರು.ಸುದರ್ಶನ ಅವರು ಶನಿವಾರವೂ ಮನೆಯಲ್ಲಿ ಕೂರಲಿಲ್ಲ. ನಜರ್‌ಬಾದ್ ಸೆಂಚುರಿ ಪಾರ್ಕ್ ಲೇಔಟ್‌ನಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದರು. ಆದರೆ ಇವರ ಸುತ್ತ ಖಾಕಿಧಾರಿಗಳು ಮತ್ತು ಗನ್‌ಮೆನ್ ಇದ್ದರು. ಈ ಸಂದರ್ಭದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.