ಬೆಂಗಳೂರಿಗೆ ನೇರ ರೈಲು ಬೇಕು

7

ಬೆಂಗಳೂರಿಗೆ ನೇರ ರೈಲು ಬೇಕು

Published:
Updated:

ಗುಲ್ಬರ್ಗ ಜಿಲ್ಲೆಯಿಂದ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣ ಮಾಡುವವರಿಗೆ ತೊಂದರೆಯಾಗುತ್ತಿದೆ. ಬೆಂಗಳೂರಿಗೆ ಹೋಗುವ ರೈಲುಗಳು ಪುಣೆ, ಸೋಲಾಪುರ ಮಾರ್ಗವಾಗಿ ಬರುವುದರಿಂದ ಅವು ಗುಲ್ಬರ್ಗಕ್ಕೆ ಬರುವ ವೇಳೆಗೆ ಅಲ್ಲಿನ ಪ್ರಯಾಣಿಕರಿಂದ ತುಂಬಿರುತ್ತವೆ.

 

ಗುಲ್ಬರ್ಗದಿಂದ ಹೊರಡುವ ಪ್ರಯಾಣಿಕರಿಗೆ ಬೋಗಿಗಳಲ್ಲಿ ಕಾಲು ಇಡಲು ಸಹ ಜಾಗ ಇರುವುದಿಲ್ಲ. ಮಹಿಳಾ ಪ್ರಯಾಣಿಕರು ಅನುಭವಿಸುವ ಕಷ್ಟಗಳು ಹೇಳತೀರದು. ಬಸ್ಸುಗಳಲ್ಲಿ ಪ್ರಯಾಣ ಮಾಡುವುದಕ್ಕಿಂತ ರೈಲು ಪ್ರಯಾಣ ಅಗ್ಗ. ಹೀಗಾಗಿ ರೈಲುಗಳಲ್ಲಿ ಪ್ರಯಾಣ ಮಾಡಲು ಜನರು ಬಯಸುತ್ತಾರೆ.ರಾಜ್ಯದ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮುಂತಾದ ನಗರಗಳಿಂದ ಬೆಂಗಳೂರಿಗೆ  ನೇರ ರೈಲುಗಳು ಸಂಚರಿಸುತ್ತವೆ. ಅದೇ ರೀತಿ ದಿನಕ್ಕೆ ಒಂದು ರೈಲನ್ನು ಗುಲ್ಬರ್ಗದಿಂದ ಬೆಂಗಳೂರಿಗೆ ಓಡಿಸುವ ವ್ಯವಸ್ಥೆ ಮಾಡಬೇಕು. ರಾಜ್ಯದವರೇ ಆದ ರೈಲ್ವೆ ಸಚಿವ ಕೆ. ಎಚ್. ಮುನಿಯಪ್ಪ ಅವರು ಈ ಭಾಗದ ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿ  ಮುಂದಿನ ರೈಲ್ವೆ ಬಜೆಟ್‌ನಲ್ಲಿ ಗುಲ್ಬರ್ಗದಿಂದ ಬೆಂಗಳೂರಿಗೆ  ನೇರ ರೈಲು ಓಡಾಟಕ್ಕೆ ಅವಕಾಶ ಮಾಡಿಕೊಡಬೇಕು 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry