ಭಾನುವಾರ, ಡಿಸೆಂಬರ್ 8, 2019
25 °C

ಬೆಂಗಳೂರಿನಲ್ಲಿ ಇಂಡಿಯನ್ಸ್ ಅಭ್ಯಾಸ

Published:
Updated:
ಬೆಂಗಳೂರಿನಲ್ಲಿ ಇಂಡಿಯನ್ಸ್ ಅಭ್ಯಾಸ

ಬೆಂಗಳೂರು: ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡವನ್ನು ಎದುರಿಸಲಿರುವ ಮುಂಬೈ ಇಂಡಿಯನ್ಸ್ ಉದ್ಯಾನನಗರಿಗೆ ಆಗಮಿಸಿದ್ದು, ಸೋಮವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿತು.ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ಹಾಗೂ ರಿಕಿ ಪಾಂಟಿಂಗ್ ಸಾರಥ್ಯದ ಇಂಡಿಯನ್ಸ್ ತಂಡಗಳ ನಡುವೆ ಏಪ್ರಿಲ್ 4ರಂದು ಬೆಂಗಳೂರಿನಲ್ಲಿ ಪಂದ್ಯ ನಡೆಯಲಿದೆ.ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವೈಫಲ್ಯ ಅನುಭವಿಸಿದ ಸಚಿನ್ ತೆಂಡೂಲ್ಕರ್ ಎರಡು ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡಿದರು. ಆಸ್ಟ್ರೇಲಿಯಾದ ಮಾಜಿ ನಾಯಕ ಪಾಂಟಿಂಗ್ ಅಭ್ಯಾಸದ ವೇಳೆ `ಪುಲ್‌ಶಾಟ್' ಗಳ ಬಗ್ಗೆ ಹೆಚ್ಚು ಗಮನ ನೀಡಿದರು. ಸಚಿನ್ ಜೊತೆಗೂಡಿ ರೋಹಿತ್ ಶರ್ಮ, ದಿನೇಶ್ ಕಾರ್ತಿಕ್ 45 ನಿಮಿಷಕ್ಕೂ ಹೆಚ್ಚು ತಾಲೀಮಿನಲ್ಲಿ ತೊಡಗಿದ್ದರು. ಇದೇ ವೇಳೆ ಆರ್‌ಸಿಬಿ ಆಟಗಾರರು ಇದ್ದರು.ಬೌಲಿಂಗ್ ಮಾಡಲಾರೆ: ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬಾಷ್‌ನಲ್ಲಿ ಬೌಲಿಂಗ್ ಮಾಡಿದ್ದೆ. ಆದರೆ, ಐಪಿಎಲ್‌ನಲ್ಲಿ ಅಂತಹ `ಸಾಹಸ'ಕ್ಕೆ ಕೈ ಹಾಕುವುದಿಲ್ಲ ಎಂದು ಪಾಂಟಿಂಗ್ ಹೇಳಿದ್ದಾರೆ. `ಐಪಿಎಲ್‌ನಲ್ಲಿ ಬೌಲಿಂಗ್ ಮಾಡುವುದಿಲ್ಲ ಎಂದು ನಮ್ಮ ತಂಡದ ಹುಡುಗರಿಗೆ ಹೇಳಿದ್ದೇನೆ. ಏಕೆಂದರೆ, ಭಾರತದಲ್ಲಿ ಚಿಕ್ಕ ಕ್ರೀಡಾಂಗಣಗಳಿವೆ' ಎಂದು ತುಟಿ ಅಂಚಿನಲ್ಲಿ ನಗೆ ಅರಳಿಸಿದರು.

ಪ್ರತಿಕ್ರಿಯಿಸಿ (+)