ಬೆಂಗಳೂರಿನಲ್ಲಿ ನಾಳೆ ಸರ್ಕಾರದಿಂದ ಗೌರವ

ಭಾನುವಾರ, ಮೇ 26, 2019
28 °C

ಬೆಂಗಳೂರಿನಲ್ಲಿ ನಾಳೆ ಸರ್ಕಾರದಿಂದ ಗೌರವ

Published:
Updated:

ಬಾಗಲಕೋಟೆ: ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿರುವ ಕವಿ ಡಾ. ಚಂದ್ರಶೇಖರ ಕಂಬಾರ ಅವರಿಗೆ ರಾಜ್ಯ ಸರ್ಕಾರವು 5 ಲಕ್ಷ ರೂಪಾಯಿ ನಗದು ನೀಡಿ ಅಭಿನಂದಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಎಂ. ಕಾರಜೋಳ ಶನಿವಾರ ಇಲ್ಲಿ ತಿಳಿಸಿದರು.ಇದೇ 26ರಂದು  ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಕಂಬಾರ ಅವರನ್ನು ಅಭಿನಂದಿಸುವರು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ನಾಟಕೋತ್ಸವ: ಕಂಬಾರ ವಿರಚಿತ  `ಶಿವರಾತ್ರಿ~ ಮತ್ತು `ಜಯಸಿದ್ದ~ ಮತ್ತಿ ತರ ಆಯ್ದ ನಾಟಕಗಳ ಕುರಿತು ರಾಜ್ಯದಾದ್ಯಂತ ನಾಟಕೋತ್ಸವ ಏರ್ಪಡಿ ಸಲಾಗುವುದು ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry