ಬುಧವಾರ, ಮೇ 18, 2022
27 °C

ಬೆಂಗಳೂರಿನಿಂದ ವಿಶೇಷ ರೈಲಿಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ವಿಶ್ವ ಕನ್ನಡ ಸಮ್ಮೇಳನ ಸಂದರ್ಭದಲ್ಲಿ ಬೆಂಗಳೂರಿನಿಂದ ಬೆಳಗಾವಿ ತನಕ ವಿಶೇಷ ರೈಲು ವ್ಯವಸ್ಥೆ ಮಾಡುವ ಸಂಬಂಧ ಪ್ರಯತ್ನಗಳು ನಡೆದಿದ್ದು, ಇದೇ ಮಾರ್ಚ್ 10ರಂದು ರಾತ್ರಿ 10 ಬೆಂಗಳೂರಿ ನಿಂದ ಬಿಡುವ ಈ ರೈಲು ಬೆಳಗಾವಿಗೆ 11ರಂದು ಬೆಳಿಗ್ಗೆ ತಲುಪುವಂತೆ ಯೋಜನೆ ರೂಪಿಸಲಾಗಿದೆ ಎಂದು ವಿಶ್ವ ಕನ್ನಡ ಸಮ್ಮೇಳನ ವಿಶೇಷಾಧಿಕಾರಿ ಐ.ಎಂ.ವಿಠ್ಠಲಮೂರ್ತಿ ಸೋಮವಾರ  ತಿಳಿಸಿದರು.ಅದೇ ರೀತಿ ಮಾರ್ಚ್ 13ರಂದು ರಾತ್ರಿ ಬೆಳಗಾವಿ ಬಿಟ್ಟು 14ರಂದು ಬೆಳಿಗ್ಗೆ ಬೆಂಗಳೂರು ತಲುಪುವಂತೆ ಮಾಡಲಾಗುತ್ತಿದೆ. ಸುಮಾರು 1500 ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಯಲ್ಲೂ ವಿಮಾನ ಇಳಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ಅನುಕೂಲವಾಗಲಿದೆ. ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.ಕಲಾವಿದರು: ಸಮ್ಮೇಳನದಲ್ಲಿ ಒಟ್ಟು 5700 ಕಲಾವಿದರು ಭಾಗವಹಿಸಲಿದ್ದಾರೆ. ಆ ಪೈಕಿ 3100 ಕಲಾವಿದರು ಉತ್ತರ ಕರ್ನಾಟಕ ಭಾಗದವ ರಾಗಿದ್ದಾರೆ. ಉಳಿದ 2600 ರಾಜ್ಯದ ವಿವಿಧ ಭಾಗ ದವರು. ಹೊರದೇಶಗಳ 250 ಕಲಾವಿದರು ಭಾಗ ವಹಿಸುವರು. ಕಲಾವಿದರಿಗೆ ಸಂಭಾವನೆ, ಭತ್ಯೆ ನೀಡುವ ಉದ್ದೇಶದಿಂದ ಸಮ್ಮೇಳನ ಸಮಿತಿ 2.64 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.ಆ ಪೈಕಿ ರಾಜ್ಯದ ಕಲಾವಿದರಿಗೆ 2.31 ಕೋಟಿ ರೂಪಾಯಿ ಹಾಗೂ ಹೊರ ದೇಶದ ಕಲಾವಿದರಿಗೆ 33 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಚಲನ ಚಿತ್ರೋತ್ಸವ: ಇದೇ ಮಾರ್ಚ್ 9ರಂದು ಜಿಲ್ಲೆಯಲ್ಲಿ ಕನ್ನಡ ಚಿತ್ರೋತ್ಸವ ಉದ್ಘಾಟನೆ ನಡೆಯಲಿದ್ದು, ಅನಂತನಾಗ ಹಾಗೂ ಜಯಮಾಲಾ ಉದ್ಘಾಟಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಸದ ಸುರೇಶ ಅಂಗಡಿ, ಸಿಇಒ ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.  

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.