ಗುರುವಾರ , ಜೂನ್ 24, 2021
29 °C

ಬೆಂಗಳೂರಿನ ಎಸ್‌ಜೆಪಿ ಕಾಲೇಜು ವಿರುದ್ಧ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು ಬಿ.ಎನ್.ರಾವ್ ಎಂದು ಮುದ್ರಿಸಿ ಕೈಪಿಡಿ ವಿತರಿಸಿರುವ ಬೆಂಗಳೂರಿನ ಎಸ್‌ಪಿಜೆ ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಬ್ಬಂದಿಯ ವಿರುದ್ಧ ಕುದೇರು ಗ್ರಾಮದಲ್ಲಿ ಅಂಬೇಡ್ಕರ್ ಸಂಘ ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರವು ರಾಜ್ಯದ ಪಾಲಿಟೆಕ್ನಿಕ್ ಉಪನ್ಯಾಸಕರುಗಳಿಗೆ ಭಾರತ ಸಂವಿಧಾನದ ಮೂಲ ಆಶಯ ತಿಳಿಸುವಂತೆ ನಡೆಸುತ್ತಿರುವ ತರಬೇತಿಯಲ್ಲಿ ಪ್ರಾಂಶುಪಾಲ ಎ.ಪಿ.ಕುಮಾರ್ ಮತ್ತು ಸಿಬ್ಬಂದಿ ವಿತರಿಸಿರುವ ಕೈಪಿಡಿ ಸರ್ಕಾರ ಕೂಡಲೇ ಮುಟ್ಟಗೋಲು ಹಾಕಬೇಕು. ಸಮಾಜವನ್ನು ತಪ್ಪುದಾರಿಗೆ ಎಳೆಯುತ್ತಿರುವ ಇಂತಹ ದ್ರೋಹಿಗಳನ್ನು ಕಾಲೇಜಿನಿಂದ ಹೊರದೂಡಬೇಕು ಎಂದು ಪ್ರತಿಭಟನಾಕಾರರು ದಿಕ್ಕಾರದ ಘೋಷಣೆ ಕೂಗಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಜಿಲ್ಲಾ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಕಮರವಾಡಿ ಮಹದೇವಸ್ವಾಮಿ ಮಾತನಾಡಿ, ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ವಿರುದ್ಧ ಜಾತಿವಾದಿ ಮನಸ್ಸುಗಳು ಶಿಸ್ತುಬದ್ದ ದಾಳಿ ನಡೆಸಿವೆ. ಅವರ ಆಯಾಮಗಳನ್ನು ವಿಫಲಗೊಳಿಸಿವೆ.ಡಾ.ಅಂಬೇಡ್ಕರ್ ಸಂವಿಧಾನ ಬರೆದಿಲ್ಲ ಎಂಬ ಗೊಂದಲ ಹೇಳಿಕೆ ನೀಡಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.ಸಂವಿಧಾನದ ವಿರುದ್ಧವೇ ಕೈಪಿಡಿ ತಂದಿರುವ ಪ್ರಾಂಶುಪಾಲ ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು. ಸಂವಿಧಾನಕ್ಕೆ ಅಪಪ್ರಚಾರ ಮಾಡಿರುವ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಅಶೋಕ್, ತಾ.ಪಂ.ಸದಸ್ಯ ಮಹದೇವಯ್ಯ, ಗ್ರಾ.ಪಂ.ಸದಸ್ಯ ಬಿ.ಜಯಶಂಕರ್, ಹೆಗ್ಗವಾಡಿ ಮಹದೇವಯ್ಯ, ಕೆ.ಸಿ.ರೇವಣ್ಣ, ನಿಂಗರಾಜು, ಪ್ರಭುಸ್ವಾಮಿ, ಜಲೇಂದ್ರ, ಸಿದ್ದರಾಜು, ಪುಟ್ಟಸ್ವಾಮಿ ಇತರರು ಭಾಗವಹಿಸಿದ್ದರು.   

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.