ಶನಿವಾರ, ಮೇ 8, 2021
19 °C

ಬೆಂಗಳೂರಿನ ಮೊದಲ ಎದುರಾಳಿ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್‌ಬಾಲ್ ಸಂಸ್ಥೆ (ಬಿಡಿಎಫ್‌ಎ) ಹಾಗೂ ಪ್ರೊಕಾಮ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ಏಪ್ರಿಲ್ 19ರಿಂದ 24ರ ವರೆಗೆ ಮಹೀಂದ್ರಾ ಯೂತ್ ಫುಟ್‌ಬಾಲ್ ಲೀಗ್ ಟೂರ್ನಿ (14 ವರ್ಷದೊಳಗಿನ) ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಬೆಂಗಳೂರು ತಂಡ ಮುಂಬೈ ಎದುರು ಸೆಣಸಲಿದೆ.`ಅಶೋಕ ನಗರದಲ್ಲಿರುವ ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ (ಕೆಎಸ್‌ಎಫ್‌ಎ) ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದೆ. ಆತಿಥೇಯ ಬೆಂಗಳೂರು, ದೆಹಲಿ, ಗೋವಾ, ಕೇರಳ, ಕೋಲ್ಕತ್ತ ಹಾಗೂ ಮುಂಬೈನ ಶಾಲಾ ತಂಡಗಳು ಈ ಟೂರ್ನಿಯಲ್ಲಿ ಪೈಪೋಟಿ ನಡೆಸಲಿವೆ~ ಎಂದು ಕೆಎಸ್‌ಎಫ್‌ಎ ಅಧ್ಯಕ್ಷ ಎ.ಆರ್. ಖಲೀಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂವರು ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ. ಈ ಆಟಗಾರರು ಸ್ಕಾಟ್ಲೆಂಡ್‌ನ `ಸೆಲ್ಟಿಕ್~ ಫುಟ್‌ಬಾಲ್ ಕ್ಲಬ್‌ನಲ್ಲಿ ತರಬೇತಿ ಪಡೆಯುವ ಅವಕಾಶ ಪಡೆಯಲಿದ್ದಾರೆ. ಆಯಾ ನಗರಗಳಲ್ಲಿ ಅಂತರ ಶಾಲಾ ಟೂರ್ನಿ ಆಯೋಜಿಸುವ ಮೂಲಕ ಈ ಟೂರ್ನಿಗೆ ತಂಡಗಳನ್ನು ಆಯ್ಕೆ ಮಾಡಲಾಗಿದೆ~ ಎಂದು ಅವರು ವಿವರಿಸಿದರು.`ಸೆಲ್ಟಿಕ್ ಕ್ಲಬ್‌ನ ತರಬೇತುದಾರರಾದ ಮಾರ್ಕ್ ರೀಡ್, ಜೋಸ್ ರೊಮೆರೊ ಹಾಗೂ ಮಾರ್ಕ್ ಟಾಬಿನ್ ಅವರು ಏಪ್ರಿಲ್ 15ರಿಂದ 18ರ ವರೆಗೆ ನಗರದಲ್ಲಿ ನಡೆದ ಶಿಬಿರದಲ್ಲಿ ಈ ಆರು ತಂಡಗಳ ಆಟಗಾರರಿಗೆ ತರಬೇತಿ ನೀಡಿದ್ದಾರೆ. ಮಹೀಂದ್ರಾ ಸಮೂಹ ಸ್ಕಾಟ್ಲೆಂಡ್‌ನ ಕ್ಲಬ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಫುಟ್‌ಬಾಲ್ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಬೇಕು ಎನ್ನುವುದು ನಮ್ಮ ಉದ್ದೇಶ~ ಎಂದು ಮಹೀಂದ್ರಾ ಸಮೂಹದ ಕಾರ್ಪೊರೇಟ್ ವಿಭಾಗದ ಅಧಿಕಾರಿ ಜಿ.ಎಂ. ಮುಫದ್ದಲ್ ಚೂನಿಯಾ ಹೇಳಿದರು.ವಿಜೇತ ತಂಡ 50,000 ನಗದು ಹಾಗೂ ಟ್ರೋಫಿ, ರನ್ನರ್‌ಅಪ್ ತಂಡ 30,000 ರೂಪಾಯಿ ಬಹುಮಾನ ಪಡೆಯಲಿವೆ. ಜೊತೆಗೆ ವೈಯಕ್ತಿಕ ಪ್ರಶಸ್ತಿಗಳೂ ಲಭಿಸಲಿವೆ. ಪ್ರತಿ ದಿನ ಮೂರು ಪಂದ್ಯಗಳು ನಡೆಯಲಿದ್ದು, 24ರಂದು ಫೈನಲ್ ಜರುಗಲಿದೆ. ಮೊದಲ ವರ್ಷದ ಟೂರ್ನಿಯಲ್ಲಿ ಬೆಂಗಳೂರು ತಂಡವನ್ನು ಮಣಿಸಿ ಕೋಲ್ಕತ್ತ ಚಾಂಪಿಯನ್ ಆಗಿತ್ತು. ಕಳೆದ ವರ್ಷ ಬೆಂಗಳೂರಿನ ಸರ್ಕಾರಿ ಕ್ರೀಡಾ ಶಾಲೆಯ ಆರ್. ಮಣಿಮಾರನ್ ಸ್ಕಾಟ್ಲೆಂಡ್‌ನಲ್ಲಿ ತರಬೇತಿ ಪಡೆಯಲು ಆಯ್ಕೆಯಾಗಿದ್ದರು.ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ಶಾಲೆಗಳು: ಸೇಂಟ್ ಅಲೋಶಿಯಸ್ ಪ್ರೌಢಶಾಲೆ (ಬೆಂಗಳೂರು), ಸಿಆರ್‌ಪಿಎಫ್ ಶಾಲೆ (ದೆಹಲಿ), ಡಾನ್ ಬಾಸ್ಕೊ ಪ್ರೌಢಶಾಲೆ (ಮುಂಬೈ), ಪಂದುವಾ ಪ್ರೌಢಶಾಲೆ (ಕೋಲ್ಕತ್ತ), ಸೇಂಟ್ ಬ್ರಿಟ್ಟೊ ಪ್ರೌಢಶಾಲೆ (ಗೋವಾ) ಹಾಗೂ ಎಂಎಸ್‌ಪಿ ಎಚ್‌ಎಸ್‌ಎಸ್ (ಕೇರಳ).

ಗುರುವಾರದ ಪಂದ್ಯಗಳು: ಬೆಂಗಳೂರು-ಮುಂಬೈ (ಮಧ್ಯಾಹ್ನ 3.00), ದೆಹಲಿ-ಕೇರಳ (ಸಂಜೆ 4.00) ಹಾಗೂ ಕೋಲ್ಕತ್ತ-ಗೋವಾ (ಸಂಜೆ 5.00).

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.