ಬೆಂಗಳೂರಿನ ಯುವತಿ ರಕ್ಷಣೆ

7

ಬೆಂಗಳೂರಿನ ಯುವತಿ ರಕ್ಷಣೆ

Published:
Updated:

ನವದೆಹಲಿ: ಬೆಂಗಳೂರಿನ ಯುವತಿಯೊಬ್ಬಳನ್ನು ಇಲ್ಲಿನ ಜಿ.ಬಿ. ರಸ್ತೆಯಲ್ಲಿರುವ ವೇಶ್ಯಾವಾಟಿಕೆ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಬೆಂಗಳೂರಿನಿಂದ ಕರೆತಂದಿದ್ದ 23 ವರ್ಷ ವಯಸ್ಸಿನ ಯುವತಿಯನ್ನು ಇಲ್ಲಿನ ವೇಶ್ಯಾಗೃಹಕ್ಕೆ ಸೇರಿಸುವ ಪ್ರಯತ್ನ ಮಾಡಲಾಗಿತ್ತು. ಮಾನವ ಕಳ್ಳಸಾಗಣೆ ವಿರುದ್ಧ ಹೋರಾಡುತ್ತಿರುವ `ಶಕ್ತಿ ವಾಹಿನಿ' ಸ್ವಯಂ ಸೇವಾ ಸಂಸ್ಥೆಯ ಸಹಾಯದಿಂದ ಈ ಯುವತಿಯನ್ನು ರಕ್ಷಿಸಲಾಗಿದೆ.ಮಾನವ ಕಳ್ಳಸಾಗಣೆದಾರರ ಹಿಡಿತಕ್ಕೆ ಸಿಲುಕಿದ್ದ ಈ ಯುವತಿಯು ಬಡ ಕುಟುಂಬದವಳಾಗಿದ್ದು, ಈಕೆಗೆ ದುಡ್ಡಿನ ಆಮಿಷ ಮತ್ತು ದೆಹಲಿಯಲ್ಲಿ ಉತ್ತಮ ಕೆಲಸ ಕೊಡಿಸುವುದಾಗಿ ಬೆಂಗಳೂರಿನ ಮಹಿಳೆಯೊಬ್ಬರು ಪ್ರಲೋಭ ಒಡ್ಡಿದ್ದರು. ದೆಹಲಿಗೆ ಕರೆತಂದು ಯುವತಿಯನ್ನು ವೇಶ್ಯಾಗೃಹದ ಮಾಲೀಕರೊಬ್ಬರಿಗೆ ಮಾರಾಟ ಮಾಡಲಾಗಿತ್ತು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry