ಭಾನುವಾರ, ಏಪ್ರಿಲ್ 11, 2021
21 °C

ಬೆಂಗಳೂರಿನ ರಸ್ತೆಗಳು ಬರಿದೋ ಬರಿದು..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು (ಐಎಎನ್ಎಸ್): ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಿಂದಾಗಿ ನಗರದಲ್ಲಿನ ರಸ್ತೆಗಳು ಬಿಕೋ ಎನ್ನುತ್ತಿದ್ದರೆ ಪಬ್ ಗಳು ಕ್ರಿಕೆಟ್ ಅಭಿಮಾನಿಗಳಿಂದ ತುಂಬಿ ತುಳುಕುತ್ತಿವೆ.  ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಅಂಗಡಿ ಮುಂಗಟ್ಟುಗಳು, ದೊಡ್ಡ ದೊಡ್ಡ ಶಾಪಿಂಗ್ ಮಾಲ್ ಗಳಲ್ಲಿ ಜನರ ಸಂಖ್ಯೆ ತೀರಾ ವಿರಳವಾಗಿದ್ದರೆ, ಅತ್ತ ಟಿವಿ ಇಟ್ಟಿರುವ ಅಂಗಡಿ ಮುಂದೆಲ್ಲ ಕಾಲೂರಲೂ ಸಾಧ್ಯವಿಲ್ಲದಷ್ಟು  ಜನಸಂದಣಿ.ಸಾಮಾನ್ಯವಾಗಿ ವಾರಾಂತ್ಯದಲ್ಲಿ ವಿಪರೀತ ಟ್ರಾಫಿಕ್ ನಿಂದ ಬಸವಳಿಯ ಬೇಕಿದ್ದ ಸಂಚಾರಿ ಪೊಲೀಸರಿಗೆ ಇದರಿಂದ ಖುಷಿಯೋ ಖುಷಿ. ಅಲ್ಲೊಂದು ಇಲ್ಲೊಂದು ವಾಹನಗಳನ್ನು ಬಿಟ್ಟರೆ ರಸ್ತೆಯೆಲ್ಲಾ ಖಾಲಿ ಖಾಲಿ. ಹೀಗಾಗಿ ಆಟೋ ಚಾಲಕರು ಸಹ ತಮ್ಮ ನಿಗದಿತ ದಿನದ ಆದಾಯ ಪಡೆಯದೆ ಪರದಾಡುತ್ತಿದ್ದಾರೆ.ಪಾಕ್ ವಿರುದ್ದದ ಸೆಮಿಫೈನಲ್ ಪಂದ್ಯದ ವೇಳೆಯೂ ಕೂಡ ಬೆಂಗಳೂರು ಇದೇ ರೀತಿ ಕಂಡು ಬಂದಿತ್ತು, ಈ ಒಂದೇ ವಾರದಲ್ಲಿ ಬೆಂಗಳೂರು ಹೀಗೆ ಕಂಡು ಬಂದದ್ದು ಇದು ಎರಡನೇ ಬಾರಿಯಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.