ಬೆಂಗಳೂರು:ಮದರ್ ಡೇರಿ ಐಸ್‌ಕ್ರೀಂ

7

ಬೆಂಗಳೂರು:ಮದರ್ ಡೇರಿ ಐಸ್‌ಕ್ರೀಂ

Published:
Updated:

ಬೆಂಗಳೂರು: ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿಯ (ಎನ್‌ಡಿಡಿಬಿ) ಅಂಗ ಸಂಸ್ಥೆಯಾಗಿರುವ ಮದರ್ ಡೇರಿ, ತನ್ನ ಐಸ್‌ಕ್ರೀಂ ಉತ್ಪನ್ನಗಳನ್ನು ಬೆಂಗಳೂರು ಮಾರುಕಟ್ಟೆಗೂ ಪರಿಚಯಿಸಿದೆ.ದೆಹಲಿಯಲ್ಲಿ ಜನಪ್ರಿಯವಾಗಿರುವಂತೆ, ಬೆಂಗಳೂರಿನಲ್ಲಿಯೂ ಸಂಸ್ಥೆಯು  ತನ್ನ ಉತ್ಪನ್ನಗಳನ್ನು ತಳ್ಳು ಗಾಡಿಗಳ ಮೂಲಕ ಗ್ರಾಹಕರ ಬಳಿಗೆ ತೆಗೆದುಕೊಂಡು ಹೋಗಲಿದೆ ಎಂದು ಮದರ್ ಡೈರಿ ಪ್ರೈವೇಟ್ ಲಿಮಿಟೆಡ್‌ನ ಹಾಲಿನ ಉತ್ಪನ್ನ ವಿಭಾಗದ ವಹಿವಾಟು ಮುಖ್ಯಸ್ಥ ಸುಭಾಶಿಸ್ ಬಸು ಹೇಳಿದ್ದಾರೆ.ಮೊದಲ ವರ್ಷ ಬೆಂಗಳೂರಿನ ಐಸ್‌ಕ್ರೀಂ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಹೊಂದಲು ಸಂಸ್ಥೆ ಉದ್ದೇಶಿಸಿದೆ. ವಿವಿಧ ಬಗೆಯ ಐಸ್‌ಕ್ರೀಂಗಳ ಬೆಲೆ ರೂ 5 ರಿಂದ  ರೂ 250ರವರೆಗೆ ಇದೆ.  ಕ್ರಮೇಣ ಮೈಸೂರು, ಮಂಗಳೂರು ಮತ್ತಿತರ ನಗರಗಳಿಗೂ ಐಸ್‌ಕ್ರೀಂ ಮಾರಾಟ ವಹಿವಾಟು ವಿಸ್ತರಿಸಲು ಉದ್ದೇಶಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry