ಶನಿವಾರ, ನವೆಂಬರ್ 16, 2019
22 °C

ಬೆಂಗಳೂರು ಒನ್‌ನಲ್ಲೂ ಗುರುತು ಚೀಟಿ ವಿತರಣೆ

Published:
Updated:

ಬೆಂಗಳೂರು: ಹೊಸದಾಗಿ ಹೆಸರು ಸೇರಿಸಿರುವ ಮತದಾರರಿಗೆ `ಕರ್ನಾಟಕ ಒನ್' ಮತ್ತು `ಬೆಂಗಳೂರು ಒನ್' ಕೇಂದ್ರಗಳ ಮೂಲಕವೂ ಚುನಾವಣಾ ಗುರುತಿನ ಚೀಟಿ ವಿತರಿಸಲಾಗುತ್ತದೆ. ಒಂದೆರಡು ದಿನಗಳಲ್ಲಿ ಈ ಕುರಿತ ವಿವರವಾದ ಮಾಹಿತಿ ನೀಡಲಾಗುವುದು ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ತಿಳಿಸಿದರು.ಬೆಂಗಳೂರಿನಲ್ಲಿ ವಾರ್ಡ್ ಕಚೇರಿಗಳಲ್ಲಿ ಅಷ್ಟೇ ಅಲ್ಲದೆ, ಬೆಂಗಳೂರು ಒನ್ ಕೇಂದ್ರಗಳ ಮೂಲಕವೂ ಗುರುತಿನ ಚೀಟಿ ನೀಡಲಾಗುತ್ತದೆ. ವಾರ್ಡ್ ಕಚೇರಿಗಳಲ್ಲಿ ಕಾರ್ಡ್ ಪಡೆದರೆ ಹಣ ನೀಡಬೇಕಾಗಿಲ್ಲ. ಆದರೆ, ಬೆಂಗಳೂರು ಒನ್ ಕೇಂದ್ರಗಳ ಮೂಲಕ ಪಡೆದರೆ ಹತ್ತು ರೂಪಾಯಿ ನೀಡಬೇಕಾಗುತ್ತದೆ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಹೆಸರು ನೋಂದಾಯಿಸಲು 8.26 ಲಕ್ಷ ಅರ್ಜಿಗಳು ಬಂದಿವೆ. ಈ ಪೈಕಿ 4.93 ಲಕ್ಷ ಅರ್ಜಿದಾರರ ಹೆಸರನ್ನು ಪಟ್ಟಿಗೆ ಸೇರಿಸಲಾಗಿದೆ. ಜ. 28ರ ನಂತರ ಅರ್ಜಿ ಸಲ್ಲಿಸಿ, ಮತದಾರರ ಪಟ್ಟಿಯಲ್ಲಿ ಹೆಸರು ಇರುವವರು ಗುರುತಿನ ಚೀಟಿ ಪಡೆಯಬಹುದಾಗಿದೆ ಎಂದರು.ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಇದೇ 7ರವರೆಗೆ ಅವಕಾಶ ಇದೆ. ಭಾನುವಾರ (ಏ.7) ವಾರ್ಡ್ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ಅವರು ತಿಳಿಸಿದರು..

ಪ್ರತಿಕ್ರಿಯಿಸಿ (+)