ಬೆಂಗಳೂರು ಕಿಕ್ಕರ್ಸ್‌ಗೆ ಗೆಲುವು

7

ಬೆಂಗಳೂರು ಕಿಕ್ಕರ್ಸ್‌ಗೆ ಗೆಲುವು

Published:
Updated:

ಬೆಂಗಳೂರು: ಹೊಂದಾಣಿಕೆಯ ಆಟವಾಡಿದ ಬೆಂಗಳೂರು ಕಿಕ್ಕರ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಜಯ ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಕಿಕ್ಕರ್ಸ್ 4-0 ಗೋಲುಗಳಿಂದ ಶ್ರೀ ಗಜಾನನ ತಂಡವನ್ನು ಮಣಿಸಿತು. ವಿಜಯಿ ತಂಡದ ಸಂದೀಪ್ (40 ಮತ್ತು 44ನೇ ನಿಮಿಷ) ಎರಡು ಗೋಲುಗಳನ್ನು ತಂದಿತ್ತರೆ, ಸೂರಜ್ (24) ಮತ್ತು ವಿಶ್ವೇಶ್ (36) ತಲಾ ಒಂದು ಗೋಲು ಗಳಿಸಿದರು.ನ್ಯಾಷನಲ್ಸ್ ಮತ್ತು ಸನ್ ರೈಸಿಂಗ್ ನಡುವಿನ ದಿನದ ಮತ್ತೊಂದು ಪಂದ್ಯ ಗೋಲುರಹಿತ ಡ್ರಾದಲ್ಲಿ ಕೊನೆಗೊಂಡಿತು. ಶನಿವಾರ ನಡೆಯುವ ಪಂದ್ಯಗಳಲ್ಲಿ ರಾಯಲ್ಸ್- ಬಿಡಬ್ಲ್ಯುಎಸ್‌ಎಸ್‌ಬಿ ಮತ್ತು ಗೋವನ್ಸ್- ಓರಿಯಂಟಲ್ ತಂಡಗಳು ಎದುರಾಗಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry