ಬೆಂಗಳೂರು ಕೃಷಿ ವಿವಿಗೆ ಸಮಗ್ರ ಪ್ರಶಸ್ತಿ

7

ಬೆಂಗಳೂರು ಕೃಷಿ ವಿವಿಗೆ ಸಮಗ್ರ ಪ್ರಶಸ್ತಿ

Published:
Updated:

ಬೆಂಗಳೂರು: ಪ್ರಾಬಲ್ಯ ಮೆರೆದ ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಮಹಾರಾಷ್ಟ್ರದ ಅಕೋಲದಲ್ಲಿ ನಡೆದ ಅಖಿಲ ಭಾರತ 13ನೇ ಅಂತರ ಕೃಷಿ ವಿಶ್ವವಿದ್ಯಾಲಯದ ಅಥ್ಲೆಟಿಕ್ಸ್ ಕ್ರೀಡಾಕೂಟದ ಮಹಿಳಾ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು.ಅಕೋಲದ ಡಾ. ಪಂಜಾಬ್‌ರಾವ್ ದೇಶಮುಖ್ ಕೃಷಿ ವಿದ್ಯಾಪೀಠದಲ್ಲಿ ನಡೆದ ಕೂಟದಲ್ಲಿ ಬೆಂಗಳೂರು ಕೃಷಿ ವಿ.ವಿ. ವಿದ್ಯಾರ್ಥಿನಿಯರು ಮಿಂಚಿನ ಪ್ರದರ್ಶನ ನೀಡಿದರು. ನಾಲ್ಕು ಚಿನ್ನ, ಐದು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಜಯಿಸಿದರು.100, 200 ಹಾಗೂ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಗೌತಮಿ ಆರ್. ಭಾಸ್ಕರ್ ಚಿನ್ನದ ಪದಕ ಗೆದ್ದರು. ಅವರು ವೈಯಕ್ತಿಕ ಪ್ರಶಸ್ತಿಯನ್ನು ಸಹ ತಮ್ಮದಾಗಿಸಿಕೊಂಡರು. ಗೌತಮಿ, ಬಿಂದುಶ್ರೀ, ಪೂಜಾ ಹಾಗೂ ಅಕ್ಷತಾ ಅವರನ್ನೊಳಗೊಂಡ 100್ಡ4 ರಿಲೇ ತಂಡವೂ ಸ್ವರ್ಣ ತನ್ನದಾಗಿಸಿಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry