ಬೆಂಗಳೂರು ಗ್ರಾಮಾಂತರ ಜಿಲ್ಲೆ: ಗ್ರಾಮ ಪಂಚಾಯಿತಿ ಚುನಾವಣೆ

ಭಾನುವಾರ, ಮೇ 19, 2019
34 °C

ಬೆಂಗಳೂರು ಗ್ರಾಮಾಂತರ ಜಿಲ್ಲೆ: ಗ್ರಾಮ ಪಂಚಾಯಿತಿ ಚುನಾವಣೆ

Published:
Updated:

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯ ದೊಡ್ಡಬಳ್ಳಾಪುರ, ನೆಲಮಂಗಲ ಮತ್ತು ಹೊಸಕೋಟೆ ತಾಲ್ಲೂಕುಗಳ ಪಂಚಾಯಿತಿ ಕ್ಷೇತ್ರಗಳಲ್ಲಿ ಖಾಲಿಯಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.ದೊಡ್ಡಬಳ್ಳಾಪುರ ತಾಲ್ಲೂಕು ಆರೂಡಿ ಗ್ರಾಮ ಪಂಚಾಯ್ತಿಯ ಆರೂಡಿ ಕ್ಷೇತ್ರ 1 (ಪ.ಜಾ. ಮಹಿಳೆ), ನೆಲಮಂಗಲ ತಾಲ್ಲೂಕು ಯಂಟಗಾನಹಳ್ಳಿ ಗ್ರಾಮಪಂಚಾಯ್ತಿ ಹೊನ್ನಸಂದ್ರ ಕ್ಷೇತ್ರ 1 (ಪ.ಜಾ),  ಶ್ರಿನಿವಾಸಪುರ ಗ್ರಾಮ ಪಂಚಾಯ್ತಿಯ ಮೊದಲಕೋಟೆ ಕ್ಷೇತ್ರ 1 (ಸಾಮಾನ್ಯ), ವಿಶ್ವೇಶ್ವರಪುರ ಗ್ರಾಮಪಂಚಾಯ್ತಿಯ ಹುರಳಹಳ್ಳಿ ಕ್ಷೇತ್ರ 1 (ಪ.ಜಾ.ಮಹಿಳೆ), ಹೊಸಕೋಟೆ ತಾಲ್ಲೂಕಿನ ಇಟ್ಟಸಂದ್ರ ಗ್ರಾಮಪಂಚಾಯ್ತಿಯ ಹಿಂಡಿಗನಾಳ ಕ್ಷೇತ್ರ 1 (ಸಾಮಾನ್ಯ), ನಲವಾಗಿಲು ಗ್ರಾಮಪಂಚಾಯ್ತಿಯ ತರಬಹಳ್ಳಿ ಕ್ಷೇತ್ರ 1 (ಪ.ಜಾ), ಲಕ್ಕೊಂಡಹಳ್ಳಿ ಗ್ರಾಮಪಂಚಾಯ್ತಿಯ ಲಕ್ಕೊಂಡಹಳ್ಳಿ ಕ್ಷೇತ್ರ 1 (ಸಾಮಾನ್ಯ) ಸೇರಿದಂತೆ ಖಾಲಿಯಿರುವ ಒಟ್ಟು 7 ಸದಸ್ಯ ಸ್ಥಾನಗಳಿಗೆ ಮತ್ತು ಹೊಸಕೋಟೆ ತಾಲ್ಲೂಕಿನ ಮುತ್ಸಂದ್ರ ಗ್ರಾ.ಪಂ.ಚುನಾವಣೆ ನಡೆಯಲಿದೆ.ಚುನಾವಣಾ ವೇಳಾಪಟ್ಟಿ:  ಚುನಾವಣೆಗೆ ಇದೇ 28ರೊಳಗೆ ನಾಮಪತ್ರಗಳನ್ನು ಸಲ್ಲಿಸಲು ತಿಳಿಸಲಾಗಿದೆ. ಇದೇ 29 ನಾಮಪತ್ರಗಳ ಪರಿಶೀಲನೆಗೆ ಕೊನೆಯ ದಿನ. ನಾಮಪತ್ರ ಹಿಂತೆಗೆದುಕೊಳ್ಳಲು 31ಕೊನೆಯ ದಿನವಾಗಿದೆ. ಮತದಾನ ಅವಶ್ಯವಿದ್ದರೆ ಸೆಪ್ಟೆಂಬರ್ 9ರಂದು ಚುನಾವಣೆ ನಡೆಸಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್ 12ರಂದು ಮತ ಎಣಿಕೆ ನಡೆಯಲಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry