ಬೆಂಗಳೂರು ಚಲೋ ಪಾದಯಾತ್ರೆ ಆರಂಭ

7

ಬೆಂಗಳೂರು ಚಲೋ ಪಾದಯಾತ್ರೆ ಆರಂಭ

Published:
Updated:

ಧಾರವಾಡ: ಅನುದಾನ ಬಿಡುಗಡೆಗೆ ಆಗ್ರಹಿಸಿ ಮಾಜಿ ಸಚಿವ ಬಸವರಾಜ ಹೊರಟ್ಟಿ ಹಾಗೂ ಹೋರಾಟ ಸಮನ್ವಯ ಸಮಿತಿ ನೇತೃತ್ವದಲ್ಲಿ ಬುಧವಾರ `ಬೆಂಗಳೂರು ಚಲೋ~ ಪಾದಯಾತ್ರೆ ಆರಂಭವಾಯಿತು.ಅನುದಾನರಹಿತ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿ ಎದುರು ನಡೆಸಿರುವ ಆಮರಣ ಉಪವಾಸ ಸತ್ಯಾಗ್ರಹ 30ನೇ ದಿನಕ್ಕೆ ಹಾಗೂ ಮುಷ್ಕರ 70ನೇ ದಿನಕ್ಕೆ ಮುಂದುವರಿದಿದೆ. ಪಾದಯಾತ್ರೆಗೆ ಗದುಗಿನ ತೋಂಟದ ಡಾ. ಸಿದ್ಧಲಿಂಗ ಸ್ವಾಮೀಜಿ ಚಾಲನೆ ನೀಡಿದರು. ಮಲ್ಲಿಕಾರ್ಜುನ ಸ್ವಾಮೀಜಿ, ಬಸವಾನಂದ ಸ್ವಾಮೀಜಿ, ವಿಜಾಪುರದ ಹಜರತ್ ಮುರ್ತುಜಾಷಾ ಹಾಶಂಪೀರ್ ಹಾಗೂ ಸೇಂಟ್ ಜೋಸೆಫ್ ಶಾಲೆಯ ಪ್ರಾಚಾರ್ಯರು ಈ ಸಂದರ್ಭದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry