ಬೆಂಗಳೂರು- ಚೆನ್ನೈ: ಷಟ್ಟಥ ನಿರ್ಮಾಣಕ್ಕೆ ಕೇಂದ್ರ ಅಸ್ತು

7

ಬೆಂಗಳೂರು- ಚೆನ್ನೈ: ಷಟ್ಟಥ ನಿರ್ಮಾಣಕ್ಕೆ ಕೇಂದ್ರ ಅಸ್ತು

Published:
Updated:

ನವದೆಹಲಿ: ಬೆಂಗಳೂರು-ಚೆನ್ನೈ ನಡುವೆ ಷಟ್ಪಥ ಎಕ್ಸ್‌ಪ್ರೆಸ್ ರಸ್ತೆ ನಿರ್ಮಾಣ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಮಾರ್ಗದಲ್ಲಿ ವಾಹನಗಳು ಗಂಟೆಗೆ 120 ಕಿ.ಮೀ. ವೇಗದಲ್ಲಿ ಚಲಿಸಬಲ್ಲವು.ಮಾರ್ಗದುದ್ದಕ್ಕೂ ಎರಡೂ ಬದಿ ತಡೆಗೋಡೆ ಹೊಂದಿದ ಇಂತಹ ರಸ್ತೆ ರಾಷ್ಟ್ರದಲ್ಲಿ ಇದೇ ಮೊದಲಾಗಲಿದೆ.ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ-ನಿರ್ವಹಣೆ-ಹಸ್ತಾಂತರ (ಬಿಒಟಿ) ಕರಾರಿನಡಿ ಇದು ನಿರ್ಮಾಣವಾಗಲಿದೆ. ಬೆಂಗಳೂರು ಬಳಿಯ ಹೊಸಕೋಟೆ ಆರಂಭವಾಗಲಿರುವ ಇದು ಕೋಲಾರ, ಪಲಮನೇರು, ಆಂಧ್ರದ ಚಿತ್ತೂರು, ರಾಣಿಪೇಟ್ ಮೂಲಕ ರಾಷ್ಟ್ರೀಯ ಹೆದ್ದಾರಿ 4ಕ್ಕೆ ಸಮಾನಾಂತರವಾಗಿ ಹಾದುಹೋಗಲಿದೆ.ಈ ರಸ್ತೆ ಹಾದು ಹೋಗುವ ಉದ್ದ ಕರ್ನಾಟಕದಲ್ಲಿ 74 ಕಿ.ಮೀ, ಆಂಧ್ರದಲ್ಲಿ 90 ಹಾಗೂ ತಮಿಳುನಾಡಿನಲ್ಲಿ 94 ಕಿ.ಮೀ ಇರಲಿದೆ.ಪ್ರತಿ ಕಿ.ಮೀ ರಸ್ತೆ ನಿರ್ಮಾಣಕ್ಕೆ 18ರಿಂದ 20 ಕೋಟಿ ರೂಪಾಯಿ ವೆಚ್ಚವಾಗಲಿದೆ. ಈ ಯೋಜನೆಯ ಕಾಮಗಾರಿಯನ್ನು ತ್ವರಿತವಾಗಿ ನಡೆಸುವ ಸಲುವಾಗಿ ಮೂರು ತಿಂಗಳೊಳಗೆ ಎಕ್ಸ್‌ಪ್ರೆಸ್ ಮಾರ್ಗ ಪ್ರಾಧಿಕಾರ ರಚಿಸಲು ಸಚಿವಾಲಯ ಚಿಂತಿಸುತ್ತಿದೆ.2012ರ ಆರಂಭದಲ್ಲಿ ಈ ಕಾಮಗಾರಿ ಶುರುವಾಗಲಿದ್ದು, ನಂತರದ ಮೂರ‌್ನಾಲ್ಕು ವರ್ಷಗಳಲ್ಲಿ ಪೂರ್ಣವಾಗುವ ನಿರೀಕ್ಷೆ ಇದೆ. ಈ ಮಾರ್ಗದಲ್ಲಿ ಬೆಂಗಳೂರು- ಚೆನ್ನೈ ಪ್ರಯಾಣ ಅವಧಿ 3 ಗಂಟೆ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry